ನನ್ನ ಬಾಲ್ಯದಲ್ಲಿ ಯಕ್ಷಗಾನ,ದೇವಸ್ಥಾನ, ಪೂಜೆ ಲಾಟರಿ,ಇನ್ನಿತರ ಕಾರ್ಯಕ್ರಮಗಳ ಎನೌನ್ಸ್ಮೆಂಟ್ ವಾಹನ ಮಸೀದಿ ಮುಂದೆ ಹಾದು ಹೋಗುವಾಗ ಧ್ವನಿ ತಗ್ಗಿಸಿ ಅಥವಾ ಸಂಪೂರ್ಣವಾಗಿ ಬಂದ್ ಮಾಡಿ ಮಸೀದಿ ಕಣ್ಣಿನಿಂದ ಮೆರಯಾದ ನಂತರ ಧ್ವನಿವರ್ಧಕವನ್ನು ಅವರು ಬಳಸುತ್ತಿದ್ದರು.
ಅದೊಂದು ತರ ಗೌರವದ ಸೂಚಕವಾಗಿತ್ತು.
ಆದರೆ ನಾವು ನಮ್ಮ ಮತಪ್ರಭಾಷಣಗಳ ಎನೌನ್ಸ್ಮೆಂಟ್ ಗಾಡಿಯನ್ನು ಮಸೀದಿಯ ಅಂಗಳದಲ್ಲೇ ಪಾರ್ಕ್ ಮಾಡಿ ಶಬ್ದ ಮಾಲಿನ್ಯ ಆರಂಭಿಸಿದಾಗ ಮಸೀದಿಯ ಗೌರವ ಮಣ್ಣುಪಾಲಾಯಿತು.
ಇದನ್ನು ನೋಡಿ ಕಲಿತ ಇತರ ಧರ್ಮನುಯಾಯಿಗಳು ತಮ್ಮ DJ ಶಬ್ದವನ್ನು ಪಳ್ಳಿಯ ಮುಂದೆ ಪ್ರದರ್ಶಿಸಲು ಆರಂಭಿಸಿದರು!
ಅದೇ ರೀತಿ ಮೈಲಾರ್ ಗಳು ಎಂಬ ಹೆಸರಿನಲ್ಲಿ ಕರೆಯಲ್ಪಡುವ ಬಿಳಿ ಪರಿವಾರಗಳು ಜಾತಿಬೇದವಿಲ್ಲದೆ ಎಲ್ಲರಿಗೂ ಗೌರವದ ಸಂಕೇತಗಳಾಗಿದ್ದರು.
ಆದರೆ ಅವರನ್ನು ಕೆಲವರು ಸಂಘಟನೆ ಕಟ್ಟಿ ತಮ್ಮ ರಾಜಕೀಯ ಬೇಳೆಗೆ ಉಪಯೋಗಿಸಲು ಆರಂಭಿಸಿದಾಗಲೇ ಆರ್ ಎಸ್ಸ್ ಎಸ್ಸ್ ನಿರ್ಮಿತ ಬಿಜೆಪಿ ತಮಗೂ ಈ ಶಾಂತಿಯ ಪಾರಿವಾಳಗಳನ್ನು ರಾಜಕೀಯವಾಗಿ ಬಳಸಬಹುದೆಂಬ ಧೈರ್ಯ ಬಂದಿತ್ತು.
ಅದರ ಪರಿಣಾಮವೇ ಇಂದು ಬೋಳ್ಯಾರ್ನಲ್ಲಿ ನಡೆದ ಬಿಜೆಪಿಯ *ಮುಸ್ಲಿಮ್ ಧರ್ಮ ಗುರುಗಳ ಸಭೆ*
ನಮ್ಮ ಪ್ರತಿರೋಧ ಒಡ್ಡುವ ಕಾರ್ಯತಂತ್ರಗಳು ನಮ್ಮನ್ನು ನಾವೇ ಬೆನ್ನು ತಟ್ಟಿ ಉಬ್ಬಿಸುವ ಕಾರ್ಯವಾಗಿ ಮಾರ್ಪಟ್ಟಿತೇ ವಿನಹ ಚಡ್ಡಿಗಳ ಹಿಂಸಾಕೃತ್ಯಕ್ಕೆ ಎಳ್ಳಷ್ಟು ಬ್ರೇಕು ಬೀಳಲಿಲ್ಲ ಎಂಬುದಕ್ಕೆ ಕರಾವಳಿಯಲ್ಲಿ ಮತ್ತು ದೇಶಾದ್ಯಾಂತ ನಡೆಯುವ ದೊಂಬಿಗಳೇ ಶಾಕ್ಷಿ.
ಮಾತ್ರವಲ್ಲ ನಮ್ಮ ಪ್ರತಿರೋಧವೆಂಬ ಉಗ್ರ ರೂಪವನ್ನು ಅವರು ಆಯುಧವನ್ನಾಗಿಸಿ ಮುಗ್ಧ ಹಿಂದುಗಳನ್ನು ಕೂಡಾ ಆರ್ ಎಸ್ಸ್ ಎಸ್ಸ್ ಮಾಡುವಲ್ಲಿ ಸಫಲರಾದರು.ಕೊನೆಯಲ್ಲಿ ಬಾಕಿಯಾದವರು ಕೆಲವು ಪ್ರಗತಿಪರರೆಂಬ ಚಿಂತಕರು ಮತ್ತು ಸಾಹಿತಿಗಳು!
ನಾವು ಅವರದೇ ಶೈಲಿಯಲ್ಲಿ ಪಕ್ಷ ಕಟ್ಟಿ ಅವರನ್ನು ಮಾದರಿಯನ್ನಾಗಿ ಮಾಡಿದಾಗ ಇದೀಗ ನಮ್ಮನ್ನು ಅವರು ಮಾದರಿ ಮಾಡುತ್ತಾ ಇದ್ದಾರೆ.ಅದರ ಫಲವಾಗಿದೆ ಇಂದಿನ *ಧರ್ಮಗುರು ಸಭೆ*
ಅವರಲ್ಲಿಯೂ ಇದೀಗ ಧರ್ಮಗುರುಗಳ ಸಂಘಟನೆಯೊಂದು ಹುಟ್ಟಿ ಬಂದರೆ ಅಚ್ಚರಿಪಡಬೇಕಾಗಿಲ್ಲ.
ಇಂದಿನ ಪ್ರಥಮ *ಧರ್ಮಗುರು ಸಭೆ*ಗೆ ಬರೋಬ್ಬರಿ ಐನೂರು ಮಂದಿ ಭಾಗವಹಿಸುವಂತೆ ಮಾಡಲು ಅವರಿಗೆ ಸಾದ್ಯವಾಗಿದ್ದರೆ ನಂತರದ ಹೆಜ್ಜೆಯಲ್ಲಿ *ಮೈಲಾರ್ ಸಂಘಟನೆ* ಮಾಡಲು ಅವರಿಗೆ ಹೆಚ್ಚೇನು ಪ್ರಯಾಸವಾಗದು.
ಇಲ್ಲಿ ನಾವು ಗೊಲ್ಲನಿಲ್ಲದ ಕುರಿ ಹಿಂಡಿನಂತಾಗಿದ್ದೇವೆ.ನಮ್ಮ ಅವ್ಯವಸ್ಥೆಯ ಬಗ್ಗೆ ಬೆರಳು ತೂರಿಸುವ ಗೊಡವೆಗೆ ಹೋಗದೆ ವ್ಯವಸ್ಥೆಯಲ್ಲಿ ಆಗಾಗ ಗೊಚರಿಸುವ ಬಿರುಕುಗಳ ಕಡೆ ಬೊಟ್ಟು ಮಾಡಿ ಆಕಾಶ ಬಿದ್ದಂತೆ ರಾದ್ದಾಂತ ಮಾಡುತ್ತೇವೆ!
ಕೆಲವರ ಆಕ್ರೋಶ ಆವೇಶ ನೋಡುವಾಗ ಅವರೇನು *MRM* ನ ಪ್ರಚಾರದ ಗುತ್ತಿಗೆ ಪಡೆದವರೋನೋ ಎಂಬ ಸಂಶಯ ಮೂಡುತ್ತದೆ.
ಪ್ರತಿಯೊಂದಕ್ಕೂ MRM ಮುದ್ರೆ ಒತ್ತುತ್ತಿದ್ದಾರೆ!
ಬಿಜೆಪಿ ಯ ಸಭೆಗೆ ಹೋದ ಮೈಲಾರ್ ಗಳನ್ನು ಟಾರ್ಗೆಟ್ ಮಾಡಿ ಅವರ ವಿರುದ್ದ ತೀಕ್ಷ್ಣ ಬಾಣ ತೂರುವುದರಲ್ಲೇ ಮಗ್ನರಾಗಿರುವ ನಾವು ಅವರು ಯಾತಕ್ಕಾಗಿ ಹೋದರು ಎಂಬುದರ ಬಗ್ಗೆ ಚರ್ಚೆ ಆಗುವುದೇ ಇಲ್ಲ.
ವಾಸಿಸಲು ಒಂದಿಂಚು ಭೂಮಿ ಕೂಡಾ ಇಲ್ಲದೆ, ಮೊಹಲ್ಲಾದ ಜನರ ಬೈಗುಳಗಳ ದಾಸರಾಗಿ ಒಡಲಲ್ಲಿ ನೂರಾರು ಬೇಗುದಿಗಳನ್ನು ತುಂಬಿ ಯಾಂತ್ರಿಕರಂತೆ ನಡೆಯುವ ಮೈಲಾರ್ ಗಳ ತುಚ್ಛ ಸಂಬಳದ ಕುರಿತು ಬಾಯೆತ್ತದವನು ಕೂಡಾ ಇಂದು ಫುಲ್ ಗರಂ ಆಗಿದ್ದ!
ಕೇವಲ ಆರ್ ಎಸ್ಸ್ ಎಸ್ಸ್ ವಿರುದ್ದ ಮಾತ್ರ ಉಗ್ರ ಪ್ರತಿರೋಧ ಒಡ್ಡಿ ಸಮುದಾಯದ ಒಳಗೆ ಇರುವ ಅವ್ಯವಸ್ಥೆ ಗಳ ಕುರಿತು ಚಿಂತಿಸದೆ ಹೋದರೆ ಮುಂದಿನ *ಧಾರ್ಮಿಕ ಗುರು ಸಭೆ* ಯಲ್ಲಿ ಸಾವಿರಕ್ಕಿಂತಲೂ ದುಪ್ಪಟ್ಟು ಮುಂಡಾಸುದಾರಿಗಳನ್ನು ಒಟ್ಟು ಸೇರಿಸಲು ಚಡ್ಡಿಗಳಿಗೆ ಯಾವುದೇ ಪ್ರಯಾಸವಾಗಲಾರದು ಎಂಬುದನ್ನು ನಾವು ಮರೆಯಬಾರದು.
-ಅಬೂಶಝ
No comments:
Post a Comment