Monday, 25 December 2017

ಸಾರ್ವತ್ರಿಕ ಟೀಕೆಗೆ ಗುರಿಯಾಗುತ್ತಿರುವ ಜಮಾತ್ ಕಮಿಟಿಗಳ ಕುರುಡು ನಿರ್ಣಯಗಳು


ಕೆಲವು ದಿನಗಳಿಂದ ವಾಟ್ಸಾಪ್ ನಲ್ಲಿ ಮಸೀದಿಯೊಂದರ ಜಮಾತ್ ಕಮಿಟಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡದ್ದು ಬಾರೀ ಟೀಕೆಗೆ ಗುರಿಯಾಗಿದೆ.

ಜಾಹಿಲಿಯ್ಯಾ ಕಾಲದಲ್ಲಿ ಮಕ್ಕಾ ಖುರೈಶಿಗಳು ಇಂತಹ ಅಪ್ರಭುಧ್ಧತೆಯ ನಿರ್ಣಯಗಳನ್ನು ಬರೆದು ಪವಿತ್ರ ಕ‌ಅಬಾದಲ್ಲಿ ತೂಗುಹಾಕುತ್ತಿದ್ದರು.
ಶಿಅಬ್ ಅಬೀ ತಾಲಿಬ್ ಕಣಿವೆಯಲ್ಲಿ ಪುಣ್ಯರಸೂಲರನ್ನು ಮತ್ತು ಸಂಗಡಿಗರನ್ನು  ಬಹಿಷ್ಕರಿಸುವ ಠರಾವು ಮಕ್ಕಾ ಖುರೈಶಿಗಳು ಬರೆದು ಕ‌ಅಬಾದಲ್ಲಿ ತೂಗು ಹಾಕಿದ್ದರು.ಕೊನೆಗೆ ಅವರೇ ಅದನ್ನು ಕಿತ್ತುಹಾಕಿದರು!
ಅಲ್ಲಾಹು ಅವರಿಂದಲೇ ಅದನ್ನು ತೆಗೆಸಿದ!

ಜಮಾತ್ ಕಮಿಟಿಯೆಂದರೆ ಅದೇನು ಸುಪ್ರೀಂ ಅಲ್ಲ.ಅಲ್ಲಾಹನ ಭವನದಲ್ಲಿ ಅಧಿಕಾರ ನಡೆಸುವ ಅಧಿಕಾರ ಯಾವುದೇ ಜಮಾತ್ ಕಮಿಟಿಗೆ ಇಲ್ಲ.
ಮಸೀದಿ ಎಂಬ ಭವನ ಅಲ್ಲಾಹನದ್ದು.ಅಲ್ಲಿ ಅಧಿಕಾರ ಚಲಾಯಿಸುವುದೆಂದರೆ ಅಲ್ಲಾಹನ ಮೇಲೆ ಅಧಿಕಾರ ಚಲಾಯಿಸಿದಂತೆ.
ಆದ್ದರಿಂದಲೇ ಯಾವುದೇ ಕಮಿಟಿಗೆ ಮಸೀದಿಯ ಅಧಿಕಾರ ಎಂಬುವುದು ಇಲ್ಲವೇ ಇಲ್ಲ. ಏನಿದ್ದರೂ ಅವರು ಮಸೀದಿಯ ಸೇವೆಗೆ ಅರ್ಹರು.
ಮಸೀದಿಯಲ್ಲಿ ಒಂದು ವಕ್ತ್ ಜಮಾತ್ ನಡೆದಿಲ್ಲವೆಂದರೆ ಮೊತ್ತಮೊದಲಿಗರಾಗಿ ಮಸೀದಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ತಪ್ಪುಗಾರರಾಗುತ್ತಾರೆ.
ಆ ನಿಟ್ಟಿನಲ್ಲಿ ತಮ್ಮ ಪರಲೋಕ ಸಂರಕ್ಷಣೆಗೆ ಪೂರಕವಾಗುವ ನಿರ್ಣಯಗಳನ್ನು ಹೊರತರುವುದನ್ನು ಬಿಟ್ಟು ಮನಷ್ಯ ಮನಸ್ಸುಗಳ ಮದ್ಯೆ ಬಿರುಕು ಸ್ರೃಷ್ಟಿಸುವ ಕುರಡು ಕರಡುಗಳನ್ನು ಹೊರತರಬಾರದು.

ಪಳ್ಳಿ ಜಮಾತ್ ಕಮಿಟಿಯೆಂದರೆ ತಿಂಗಳಾಗುವಾಗ ಉಸ್ತಾದರ ಸಂಬಳ ಕೊಟ್ಟು ತೀರಿಸುವುದು,ವಂತಿಗೆ ಕಲಕ್ಷನ್ ಮಾಡುವುದು,ವರ್ಷದಲ್ಲಿ ಬರುವ ರಾತೀಬು,ಈದ್ ಮೀಲಾದ್ ಆಚರಿಸುವುದಕ್ಕೆ ಮಾತ್ರ ಸೀಮಿತವೆಂದು ಬಗೆದವರಿದ್ದಾರೆ.
ನಿಜವಾಗಿಯೂ ಜಮಾತ್ ಕಮಿಟಿ ಆಯಾ ಮಹಲ್ಲಿನ ಪ್ರತಿಯೊಂದು ಮನೆಗಳಲ್ಲಿ ಶಾಂತಿ ಸಮಾಧಾನ, ಸಹಬಾಳ್ವೆ ಬದುಕಿನ ಸೇತುವೆಯಾಗ ಬೇಕೆ ಹೊರತು ಅಮೇರಿಕಾದ ಟ್ರಂಪ್ ನಂತೆ ಸರ್ವಾಧಿಕಾರಿಯಾಗಿ ಊರಿಗೆ ಮಾರಿಯಾಗಬಾರದು.

ನಿಕಾಹ್ ಎಂಬುದು ಸುನ್ನತ್ತಾದ ಕಾರ್ಯ.
ವರ ಮತ್ತು ವಧುವಿನ ತಂದೆ ಎರಡು ಶಾಕ್ಷಿಗಳ ಮುಂದೆ ಸ್ವತಃ ಪರಸ್ಪರ ಈಜಾಬ್/ ಖಬೂಲ್ ಮಾಡಿದರೆ ನಿಕಾಹ್ ಸಿಂಧುವಾಗುತ್ತದೆ.ಅದಕ್ಕೆ ಪಳ್ಳಿ ಖತೀಬೇ ಹೇಳಿ ಕೊಡಬೇಕೆಂದು ಕಡ್ಡಾಯ ನಿಯಮ ಇಸ್ಲಾಮಿನಲ್ಲಿ ಇಲ್ಲ.
ಹಾಗಿರುವಾಗಲೇ ಇಂತಹ ಅಪ್ರಭುಧ್ಧತೆಯ ತೀರ್ಮಾನವನ್ನು ಜಮಾತ್ ಕಮಿಟಿ ಕಡ್ಡಾಯ ಮಾಡುವುದು ಜಾಹಿಲಿಯ್ಯಾ ಮಕ್ಕಾ ಖುರೈಶಿಗಳ ತೀರ್ಮಾನದಂತೆ ಸರ್ವಾಧಿಕಾರಿಯುತವೇ ಹೊರತು ನ್ಯಾಯಯುತವಲ್ಲ.

ಅದೇ ಸಮಯ ಬರಕತ್ ಉದ್ದೇಶಿಸಿ ಮತ್ತು ವಚನಗಳ ಸ್ಪಷ್ಟತೆ ಬಗ್ಗೆ ನಿಗಾ ವಹಿಸಿ ಉಲಮಾಗಳ ಹಾಗೂ ಸಾದತುಗಳ ಮೂಲಕ ನಿಕಾಹ್ ನೆರವೇರಿಸುವುದು ವಾಡಿಕೆ.
ಆದರೆ ಅದನ್ನೀಗ ರಾಜಕೀಯ ಚದುರಂಗಾಟಕ್ಕೆ ಮೀಸಲಿಟ್ಟಂತೆ ಕೆಲವರು ವರ್ತಿಸುತ್ತಿರುವುದು ಖಂಡನೀಯ.

ಅದರಲ್ಲೂ ಗ್ರೂಫಿಸಂ ತಲೆಗೆ ಅಡರಿದ ಕೆಲವರು ಸಂತೋಷದ ಸಂಭ್ರಮದ ಮದುವೆ ಮಂಟಪವನ್ನು ಸೂತಕದ ಸೂರನ್ನಾಗಿ ಮಾರ್ಪಡಿಸುತ್ತಿದ್ದಾರೆ.

ವಾಟ್ಸಪ್ ಮುಖಾಂತರ ರವಾನೆಯಾಗುತ್ತಿರುವ  ಮಸೀದಿಯೊಂದರ ನಿರ್ಣಯದಲ್ಲಿ ವರನ ನಿಕಾಹನ್ನು ಆ ಪಳ್ಳಿಯ ಖತೀಬ್ ಅಥವಾ ಮಿತ್ತಬೈಲ್ ಉಸ್ತಾದ್,ಮಂಗಳೂರು ಖಾಝಿ ತಾಖ ಉಸ್ತಾದ್ ಮಾತ್ರ ನಿರ್ವಹಿಸ ಬೇಕಂತೆ.ಹಾಗಾದರೆ ದುಗ್ಗಲಡ್ಕ ಝೈನುಲ್ ಆಬಿದೀನ್ ತಂಙಳ್,ಕುಂಬೋಳ್ ಅಲಿ ತಂಙಳ್,ಅತ್ರಾಡಿ ಖಾಝಿ,ಬಂಬ್ರಾಣ ಉಸ್ತಾದ್, ಸಮಸ್ತದ ಪರಮೋಚ್ಚ ನಾಯಕ ಸೆಯ್ಯದ್ ಜಿಫ್ರಿ ತಂಙಳ್,ಶೈಖುನಾ ಅಲಿ ಕುಟ್ಟಿ ಉಸ್ತಾದ್ ಮುಂತಾದವರು ಇದ್ದರೆ ಊರಿನ  ಖತೀಬರೇ ನಿಕಾಹ್ ನೇರವೇರಿಸ ಬೇಕಾ ಅದಲ್ಲ ಈ ಕುರುಡು ನಿರ್ಣಯಗಳನ್ನು ಉಲ್ಲಂಘನೆ ಮಾಡುವುದಾ?

ಕಾರಣ ಅದರಲ್ಲಿ *ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಮತ್ತು ಮಿತ್ತಬೈಲ್ ಉಸ್ತಾದ್ ರವರು*
ಎಂದು ಬರೆಯಲಾಗಿದೆ.

*ಮುಂತಾದ ಸಮಸ್ತ ಉಲಮಾಗಳು*
ಎಂಬ ಪದವನ್ನು ಉಪಯೋಗಿಸಲಿಲ್ಲ.

ಒಂದಂತು ನಾವು ತಿಳಿದಿರಲೇ ಬೇಕು ಗ್ರೂಫಿಸಂ ನೋಡಿ ಉಲಮಾ ಸಾದಾತುಗಳನ್ನು ಗೌರವಿಸುವುದು ಇಸ್ಲಾಂ ಕಲಿಸಲೇ ಇಲ್ಲ.

ಎಪಿ ವಿಭಾಗದ ಒಬ್ಬ ಖತೀಬ್ ಇದ್ದಲ್ಲಿ ಅಲ್ಲಿಗೆ ಇ ಕೆ ಸಮಸ್ತದ ಸೆಯ್ಯದ್ ಗಳಾದ ಜಿಫ್ರೀ ತಂಙಳ್,ದುಗಲಡ್ಕ ತಂಙಳ್,ಮಿತ್ತಬೈಲ್ ಉಸ್ತಾದ್ ಆಗಮಿಸಿದರೆ ನಿಕಾಹ್ ಕಾರ್ಯವನ್ನು ಅವರಿಗೆ ವಹಿಸಿಕೊಡುವುದು ಅದಬ್!

ಅಂತಹ ಸಂಧರ್ಭಗಳಲ್ಲಿ ಜಮಾತ್ ಕಮಿಟಿ ಆಯಾ ಖತೀಬರಿಗೆ ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಬೇಕು.

ಅದರಂತೆ ಈ ಕೆ ವಿಭಾಗದ ಖತೀಬ್ ಇದ್ದಲ್ಲಿ ಎಪಿ ಸಮಸ್ತದ ಯಾರಾದರೂ ದೊಡ್ಡ ಆಲಿಂ ಸೆಯ್ಯದ್ ಆಗಮಿಸಿದರೆ ಅವರಿಗೆ ಬಿಟ್ಟು ಕೊಡುವುದು ಅದಬ್!

*ಇಸ್ಲಾಮಿನ ಕೆಲವೊಂದು ಕಾನೂನುಗಳಿಗಿಂತ ಮಿಗಿಲಾಗಿ ಅದಬ್ ಪಾಲಿಸುವುದಕ್ಕೆ ಮೊದಲನೇ ಸ್ಥಾನ ಎಂಬ ತತ್ವ ಇಸ್ಲಾಮಿನಲ್ಲಿ ಇದೆ ಎಂಬುದನ್ನು ಎಲ್ಲಾ ಜಮಾತ್ ಕಮಿಟಿಗಳು ಅರಿತಿರಬೇಕು.*

ಊರಿನಲ್ಲಿ ಅದೆಷ್ಟೋ ಹೆಣ್ಣು ಹೆತ್ತವರು ವರದಕ್ಷಿಣೆ ಪಿಡುಗಿನಿಂದಾಗಿ ಕಣ್ಣೀರು ಸುರಿಸುತ್ತಿರುವಾಗ ಅದರ ಬಗ್ಗೆ ನಿರ್ಣಯ ತೆಗೆದಿದ್ದರೆ ಅದೊಂದು ಮಾದರಿ ನಿರ್ಣಯವಾಗುತ್ತಿತ್ತು.

ಅದೆಷ್ಟೋ ಮುಸ್ಲಿಂ ಹುಡುಗರು ಗಾಂಜಾ ಅಫೀಮುಗಳ ದಾಸರಾಗಿ ದೀನಿಲ್ಲದೆ ಅಂಡಲೆಯುವಾಗ ಅದರ ವಿರುದ್ಧ ಠರಾವು ಪಾಸ್ ಮಾಡಿದ್ದರೆ ಜನರು ನಿಮ್ಮ ಜಮಾತ್ ಗೆ ಸೆಲ್ಯೂಟ್ ಹೊಡೆಯುತ್ತಿದ್ದರು.

ಅದೆಷ್ಟೋ ಯುವಕರು ನಿರುದ್ಯೋಗಿಗಳಾಗಿ ಬವಣೆ ಪಡುತ್ತಿರುವಾಗ ಅವರಿಗೊಂದು ಪರಿಹಾರ ಜಮಾತ್ ಕಮಿಟಿಯ ವತಿಯಿಂದ ತೋರಿಸಿದ್ದರೆ ನಿಮ್ಮ ಪರಲೋಕಕ್ಕೆ ಅದೇ ಸಾಕಗುತ್ತಿತ್ತು.

ಫ್ಯಾಶಿಷ್ಟ್ ಶಕ್ತಿಗಳು ನಮ್ಮ ನಾಶವನ್ನೇ ಗುರಿಯಾಗಿಟ್ಟು ಕಾರ್ಯಚರಿಸುತ್ತಿರುವಾಗ ನಾವು ಒಗ್ಗಟ್ಟಾಗಿ ಕಾರ್ಯಚರಿಸುವ ಬದಲು ಮತ್ತಷ್ಟು ಭಿನ್ನತೆ ಸ್ರೃಷ್ಟಿಸುವ ಇಂತಹ ಕುರುಡು ನಿಯಮಗಳನ್ನು ತಂದು ಸಮುದಾಯವನ್ನು ಇನ್ನಷ್ಟೂ ಅಪಾಯದ ಕೂಪಕ್ಕೆ ತಳ್ಳಬೇಡಿ..  ಪ್ಲೀಸ್...

_ಅಬೂಶಝ

Friday, 13 October 2017

ಪೆಟ್ಟು ಬಿದ್ದಾಗ ನಿಜ ಮುಖ ಬಯಲಾಗುತ್ತೆ ಎಂಬುದನ್ನು ತೋರಿಸಿಕೊಟ್ಟ ಸಲಫಿಗಳು


ಮೊನ್ನೆ ತನಕ ನಾಯಕ, ನೇತಾರ, ತೌಹೀದೀ ಪ್ರಚಾರಕ, ಮಣ್ಣಾಂಗಟ್ಟಿ ಅಂತ ತಲೆಯಲ್ಲಿಟ್ಟು ನಡೆಯುತ್ತಿದ್ದ ಸಲಫಿಗಳು ಈಗ ಅದೇ ನಾಯಕನನ್ನು ದಡ್ಡ, ಬೇಕೂಫ ಅಂತೆಲ್ಲಾ ಕರೆಯತೊಡಗಿದ್ದಾರೆ. ಸಲಫಿಗಳ ನಿಜಮುಖವನ್ನು ಅನಾವರಣ ಮಾಡಿದರೆ ಕೆರಳುತ್ತಿದ್ದ ಕೆಲವು ಪೆದಂಬರು ಈಗ ತಮ್ಮ ಮುಖಂಡನಿಂದಲೇ ತಮ್ಮ ಮುಖವಾಡ ಬಯಲಾದಾಗ ಕೆಲವರು, ಆತನ ಮಾತನಲ್ಲೇನಿದೆ ಮಹಾ ಅಂತ ಸಮಾಧಾನ ಪಟ್ಟರೆ ಇನ್ನು ಕೆಲವರು ಛೆ ಈತ ನಮ್ಮ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿ ಬಿಟ್ಟನಲ್ಲ ಅಂಥ ಪೆದ್ದ, ಬುದ್ದಿಯಿಲ್ಲದವ ಅಂತೆಲ್ಲಾ ಗೊಣಗುತ್ತಿದ್ದಾರೆ. ಮರ್ಮಕ್ಕೆ ಬಿದ್ದ ಪೆಟ್ಟಿನ ಆಘಾತವನ್ನು ಒಳಗೊಳಗೆ ಬಸಿದಿಟ್ಟರೂ ಅದು ಆಕ್ರೋಶವಾಗಿ ಮೂಡಿ ಬರುತ್ತಿದೆ.

ಇಡೀ ಕರ್ನಾಟಕದ  ಸಲಫೀಗಳಿಗೇ ಮಾದರಿಯಾಗಿದ್ದ ಮುಖಂಡ ಈಗ ಇವರಿಗೆ ಕೇವಲ ಪೆದ್ದ ಸಲಫಿಯಂತೆ. ಆದರೆ ನಮ್ಮ ಉಲಮಾಗಳು ಅಂದೇ ಇವರ ಪೆದ್ದುತನವನ್ನು ಬಯಲು ಮಾಡಿದ್ದರು. ಈ ಕಾರಣಕ್ಕಾಗಿಯೇ  ಅಂದು ಉಲಮಾಗಳ ಹಸಿಮಾಂಸ ಭಕ್ಷಣೆ ಮಾಡಿದವರಿಗೆ ಇಗ ಜ್ಞಾನೋದಯವಾಗಿದೆ ಅಂತನಿಸುತ್ತದೆ.

ಏನೇ ಆದರೂ ಸ್ವಲ್ಪಮಟ್ಟಿಗೆ ಪೆಟ್ಟು ಬಿದ್ದಾಗ ತಮ್ಮ ಸಲಫಿ ನಾಯಕನೇ ಇವರಿಗೆ ಅಪಥ್ಯವಾದರು. ಪ್ರವಾದಿಯರನ್ನು, ಮುಹಿಯುದ್ದೀನ್ ಶೈಖರೊಂದಿಗೆ ಆಟವಾಡಿದರೆ ತಿಕ್ತ ಫಲವನ್ನು ಯಾರೇ ಆದರೂ ಅನುಭವಿಸಲೇಬೇಕು. ತಪ್ಪು ಮಾಡಿದ್ದಕ್ಕೆ ಚೆನ್ನಾಗಿಯೇ ಪೆಟ್ಟು ಬೀಳಲಿ. ಅದರಲ್ಲಿ ಮುಸ್ಲಿಮರಿಗೆ ಯಾವುದೇ ಅನುಕಂಪವೋ, ಸಹಾನುಭೂತಿಯೂ ಇಲ್ಲ..

  *-ಆದಿಲ್ ಜಾನ್*

PFI ಯ ಗುತ್ತಿಗೆದಾರರು ಕಾಣೆಯಾಗಿದ್ದಾರೆ

👉 ವಹ್ಹಾಬಿ ಗಳು ಐಸೀಸ್ ಗೆ ಸೇರುತ್ತಾರೆಂದು ಬಾಂಬ್ ಸಿಡಿಸಿದ ಇಸ್ಮಾಯಿಲ್ ಶಾಫಿ ಗೆ ಬಿಜೆಪಿಯ ಮುದ್ರೆ ಒತ್ತಲು ಸಮುದಾಯ ರಕ್ಷಕರು ಯಾಕೆ ಮುಂದಾಗಿಲ್ಲ. ?

👉 MRM ನ ವಕ್ತಾರ ಎಂದು ಇಸ್ಮಾಯಿಲ್ ಶಾಫಿ ಯನ್ನು ಕರೆಯಲು ಹಿಂಜರಿಕೆ ಯಾಕೆ  ?

ಬಾಯಿ ತೆರೆದರೆ ಸದಾ MRM ನ ಬಗ್ಗೆ ಯೇ ಮಾತನಾಡುವ ನಕಲಿ ಧರ್ಮ ರಕ್ಷಕರು ಸಲಪಿ ನಾಯಕ ಐಸೀಸ್ ನ ಗುಮ್ಮ ಹೊತ್ತು ತಂದರೂ ಅದನ್ನು ನೋಡಿ ಮೌನ ವಾದರೇಕೆ ?

ಜಸ್ಟ್ ಇಸ್ಮಾಯಿಲ್ ಶಾಫಿ ಯ ಹೇಳಿಕೆಯನ್ನು ಖಂಡಿಸುವ ಸೌಜನ್ಯ ವು ತೊರದ ಈ ಅಸಾಮಿಗಳು ವಹ್ಹಾಬಿ ಯತ್ ನ ಮತ್ತೊಂದು ಮುಖ ಎನ್ನುವುದು ಮತ್ತೊಮ್ಮೆ ಬಯಲಾಗುತ್ತಿದೆ.

*ಪ್ರಧಾನ ಮಂತ್ರಿ ಯನ್ನು ಭೇಟಿಯಾದ ಎಪಿ ಉಸ್ತಾದ್ ಕಾವಿ ಮೌಲವಿ ಎಂದು ಬರೆದ ಧರ್ಮ ರಕ್ಷಕರಿಗೆ ಬಿಸಿರೋಡ್ ನ ಸಲಪಿ ಮಸೀದಿ ಭಯೋತ್ಪಾದನೆಯ ತಾಣ ಎಂದು ಹೇಳಿದಾಗಲು ಕಾವಿಯ ನೆನಪಾಗದ್ದು ತಮಗೆ ತಗುಲಿದ ವಹ್ಹಾಬಿ ಸೋಂಕಿನ ಫಲ ಎಂಬುದು ಜನರು ಅರ್ಥ ಮಾಡಿ ಕೊಂಡಿದ್ದಾರೆ.*

ಸಲಪಿ ಗಳು ಉಗ್ರ ವಾದಿಗಳೆಂದು ಎಲ್ಲಿಯಾದರು ಎಪಿ ವಿಭಾಗದ ವರು ಹೇಳಿದ್ದರೆ ಈ ಧರ್ಮ ರಕ್ಷಕರು ಇಡೀ ಆಕಾಶ , ಭೂಮಿ ಒಂದು ಮಾಡುತ್ತಿದ್ದರು.

✍ *ಅಬೂ ತಾಜುದ್ದೀನ್*

ಯು.ಟಿ ಖಾದರ್ ಹಿಂಬಾಲಕರೇ ಡಿ.ವೈ.ಎಪ್.ಐ ಸಂಘಟನೆಯ ನಾಯಕರಿಗೆ ಬೆರಳು ತೊರಿಸುವ ಮುನ್ನ ನಿಮ್ಮ ಖಾದರ್ ಬಳಿ‌ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕೇಳಿ.

*1. ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಯಾವುದೇ ಮದುವೆ, ಮುಂಜಿ, ಬೊಜ್ಜ , ಕ್ರಿಕೆಟ್, ಕಬ್ಬಡ್ಡಿ ಪಂದ್ಯಾಟದ ಉದ್ಘಾಟನೆಗೆ ಎಲ್ಲಿದ್ದರೂ ಭಾಗವಹಿಸುವ ಖಾದರ್ ರವರು, ತನ್ನದೇ ಕ್ಷೇತ್ರದಲ್ಲಿ ಗಾಂಜಾ ಮಾಫಿಯದಿಂದ ಝುಬೈರ್ ರವರ ಭೀಕರ ಕೊಲೆಯಾಗಿದೆ ಇವರ ಮಯ್ಯತ್ (ಮರಣವನ್ನು) ನೋಡಲು ಯಾಕೆ ಬರಲಿಲ್ಲ.*

*2. ಮುಕ್ಕಚ್ಚೇರಿಯಲ್ಲೇ ಬೀಡು ಬಿಟ್ಟಿದ್ದ  ಸ್ಥಳೀಯ ಕಾಂಗ್ರೆಸ್ ಕೌನ್ಸಿಲರ್ ಮಯ್ಯತ್ ನೋಡಲು ಯಾಕೆ ಬರಲಿಲ್ಲ? ಇದು ಕೊಲೆಗಾರರಿಗೂ ಕೌನ್ಸಿಲರಗೂ ಇರುವ ಸಂಬಂಧಗಳನ್ನು ಧ್ರಢಪಡಿಸುವುದಿಲ್ಲವೇ?*

*3. ‎ ತನ್ನ ಕ್ಷೇತ್ರದ 18 ಕೇಸ್ ಗಳಲ್ಲಿ ಭಾಗಿಯಾದ ಒಬ್ಬ ಆರೋಪಿ ಮತ್ತೆ ತಲ್ವಾರ್ ಹಿಡಿದು ಇನ್ನೊಬ್ಬನನ್ನು ಕೊಲೆಮಾಡುತ್ತಾರೆ ಎಂದರೆ, ಇದುವಾ ಸಚಿವ ಖಾದರ್ ರವರ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುತ್ತಿರುವ ರೀತಿ?*

*4. ‎18 ಕೇಸ್ ಗಳಾದರು ಮತ್ತೆ ಇನ್ನೊಂದು ಕೊಲೆ ಮಾಡುತ್ತಾನೆ ಎಂದರೆ ಆ ಆರೋಪಿಯ ಹಿಂದೆ ಇರುವ ಪ್ರಭಾವಶಾಲಿ ವ್ಯಕ್ತಿಗಳು ಯಾರು?*

*5. ಆರೋಪಿಯ ಇತರೆ ಕೇಸ್ ಗಳಲ್ಲಿ ಅವನ ರಕ್ಷಣೆಗೆ ನಿಂತವರು ಯಾರು?*

*ಯು.ಟಿ.ಕೆ‌. ಹಿಂಬಾಲಕರೇ ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ ನಂತರ ಡಿ.ವೈ.ಎಪ್.ಐ. ಸಂಘಟನೆ ನಾಯಕರಿಗೆ ಬೆರಳು ತೊರಿಸಿ. ಅನ್ಯಾಯವಾಗಿ ಕೊಲೆಗೈಯಲ್ಪಟ್ಟ ಜುಬೇರ್ ಪರವಾಗಿ ನಿಂತಿರುವ ಡಿವೈಎಫ್ ಐ ನಾಯಕರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ ಸಾದ್ಯವಾಗದೆ ನಿಮ್ಮ ಹಿಂಬಾಲಕರಿಂದ ಡಿವೈಎಫ್ ಐ ನಾಯಕರ ತೇಜೋವಧೆ ಮಾಡುವುದನ್ನು ನಿಲ್ಲಿಸಿರಿ...*

     *ಶಾಂತಿ ಪ್ರೀಯ ಮುಕ್ಜಚೇರಿಯ ಜನತೆ.*

ಪೀಪಿಯ ಎಂ ಆರ್ ಎಂ ಮಂಚ್ ಪೋಕೋರಾಕನ ಪಂಚ್

*ಪೀಪಿ : ನಾವು ಐಕ್ಯತೆ ಮಾಡಲು ಇರುವವರು ಸಲಫಿಗಳೊಂದಿಗೆ ಐಕ್ಯತೆ ಬೇಕು ಅವರು ಮುಸ್ಲಿಮರಲ್ಲವೇ..?*

*ಪೋಕೋರಾಕ: ನಾವು ಮುಸ್ಲಿಮರಲ್ಲ ಮುಶ್ರಿಕ್ ಗಳು ಶಿರ್ಕ್ ಮಾಡುವವರು ಎಂದು ಹೇಳಿ ಅವರೇ ತಾನೇ ಸಲಫಿ ಗ್ರೂಪ್ ಮಾಡಿ ಗ್ರೂಫಿಸಂ ಆರಂಭಿಸಿದ್ದು,ನಮ್ಮನ್ನು ಬಿಟ್ಟು ಬೇರೆ ಸಂಘಟನೆ ಮಾಡಿದ್ದು,ನಮನ್ನು ಕಾಫಿರ್ ಗೆ ಹೋಲಿಕೆ ಮಾಡಿದ್ದು..?*

*ಪೀಪಿ :ಅದೂ ಅದೂ ಅದೂ*

*ಪೋಕೋರಾಕ: ನಿಮಗೆ ಮುಸ್ಲಿಮರೆಲ್ಲಾ ಒಂದೇ ಅಲ್ವಾ ಮತ್ಯಾಕೆ ಇಲ್ಲಿನ ಬಹು ಸಂಖ್ಯಾತ ಎಪಿ ಸುನ್ನೀಗಳನ್ನು ತೆರೆಮರೆಯಲ್ಲಿ ನಾಶ ಮಾಡುತ್ತಾ ಅವರ ವಿರುಧ್ದ ಅಪಪ್ರಚಾರ ಮಾಡುತ್ತಾ ಸೆಟೆದು ನಿಂತಿದ್ದು...?*

*ಪೀಪಿ : ಅದೂ ಅದೂ ಅದೂ*

*ಪೋಕೊರಾಕ :ಯುಟಿ ಖಾದರ್ ಮುಸ್ಲಿಂ ಅಲ್ವಾ ಅವರ ಸೋಲಿಗಾಗಿ ಪಣತೊಟ್ಟು ಕಾರ್ಯಾಚರಣೆ ಮಾಡುತ್ತಿದ್ದೀರಲ್ವಾ ಅವರ ವಿರುದ್ಧ ಏನೆಲ್ಲಾ ಅಪಪ್ರಚಾರ ಮಾಡುತ್ತಿದ್ದೀರಿ ನೀವು..?*

*ಪೀಪಿ:ಅದೂ ಅದೂ ಅದೂ*

*ಪೋಕೊರಾಕ :ಮುಸ್ಲಿಂ ಐಕ್ಯತೆ ಎಂದು ಹೇಳಿ ಇಮಾಮ್ ಕೌನ್ಸಿಲ್ ನಲ್ಲಿ ತರಬೇತಿ ಪಡೆದ ಅರೆ ಮೊಯಿಲಾರ್ ಗಳನ್ನು ಛೂ ಬಿಟ್ಟು ಜಮಾಅತ್ ಕಮಿಟಿಯಲ್ಲಿ ಗಲಭೆ ಎಬ್ಬಿಸುವಾಗ ಐಕ್ಯತೆ ನೆನಪಾಗಲಿಲ್ಲವೇ..?*

*ಪೀಪಿ :ಅದೂ ಅದೂ ಅದೂ*

*ಪೋಕೊರಾಕ :ಪೀಪಿಗೆ ಮುಗ್ಧ ಯುವಕರನ್ನು ಸೇರಿಸಿ ಅವರನ್ನು ಪಾಪಿ ಯನ್ನಾಗಿ ಮಾಡಿಲ್ಲವೇ ನೀವು? ಪೀಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಯುವಕರೆಲ್ಲಾ ಈಗ ಸಲಫಿಯಾಗಿಲ್ಲವೇ.?ಸುನ್ನೀ ವಿರೋಧಿಗಳಲ್ಲವೇ ಅವರು ಈಗ ಆಲಿಂಗಳನ್ನು ತಂಙಳ್ ಗಳನ್ನು ಏಕವಚನದಲ್ಲಿ ನಿಂದಿಸಿ ಸುನ್ನೀ ಆಚಾರ ವಿಚಾರಗಳನ್ನು ಅವಹೇಳನಗೈಯುತ್ತಾ ಕಾಲ ಕಳೆಯುವವರಲ್ಲವೇ ನಿಮ್ಮ ಪೀಪಿಯ ಪಾಪಿಗಳು ಅವರ ಈಮಾನ್ ಕಸಿದುಕೊಂಡಿಲ್ಲವೇ ನೀವು..?*

*ಪೀಪಿ: ಅದೂ ಅದೂ ಅದೂ*

*ಪೋಕೊರಾಕ : ಮುಗ್ಧ ಮುಸ್ಲಿಂ ಯುವತಿಯರನ್ನು ಬೀದಿಗೂ ವೇದಿಕೆಗೂ ತಂದು,ಪೆರೇಡ್ ಜಾಥಾ ಹೆಸರಿನಲ್ಲಿ ಛದ್ಮವೇಷ ಹಾಕಿ ಬೀದಿನಾಟಕ ಮಾಡಿ ಪ್ರವಾದಿ (ಸ.ಅ)ರವರನ್ನು ಧಿಕ್ಕರಿಸಿದ ನಿಮಗೂ ಇಸ್ಲಾಂ ಗೂ ಏನಯ್ಯಾ ಸಂಬಂಧ??*

*ಪೀಪಿ :ಅದೂ ಅದೂ ಅದೂ*

*ಪೋಕೊರಾಕ:ಎಲ್ಲಾ ಬಿಡು ಮೊನ್ನೆ ಸಲಫಿಯ ಇಸ್ಮಾಲಿ ಶಾಫಿ ಕಲ್ಲಡ್ಕದಲ್ಲಿ ಬಿಸಿರೋಡ್ ನಲ್ಲಿ ಐಸಿಸ್ ಉಗ್ರರು ಇದ್ದಾರೆ, ಬಿಸಿರೋಡ್ ನ ಒಂದು ಮಸೀದಿ ಉಗ್ರರದ್ದು ಎಂದು ಹೇಳಿಕೆ ಕೊಟ್ಟಾಗ ನಿಮ್ಮ ನಾಲಗೆಗೆ ಪೈ ಚೌಟಿತ್ತಾ? ಮಾತು ಮಾತಿಗೂ ಎಂ ಆರ್ ಎಂ ಮಂಚಿ ಕುಕ್ಕಾಜೆ ಎಂದು ಉರಿದು ಬೀಳುವ ನೀವು ಇಸ್ಮಾಲಿ ಶಾಫಿ ಬಗ್ಗೆ ಒಂದು ಮಾತು ಎತ್ತದೇ ಇರುವುದು ಹಾಗೂ ನಿಮಗೆ ಮಂಚಿ ಕುಕ್ಕಾಜೆ ನೆನಪಾಗದೇ ಇರುವುದು ನಿಮ್ಮದೇ ಆಶಯವಾದ ಸಲಫಿಸಂ ನ ಜನ ಆತ ಆಗಿರುವುದರಿಂದ ಅಲ್ವಾ? ಒಂದು ವೇಳೆ ಆ ಮಾತು ಇಲ್ಲಿನ ಸುನ್ನೀ ವಿಭಾಗದಿಂದ ಬರುತ್ತಿದ್ದರೆ ನೀವು ಗುದದ್ವಾರಕ್ಕೆ ಬೆಂಕಿ ಬಿದ್ದವರಂತೆ ವರ್ತಿಸುತ್ತಿದ್ದಿರಿ ಅಲ್ವಾ ನಿಮ್ಮ ಮಂಚಿ ಕುಂಚಿ ಬಿಜೆಪಿ ಸುನ್ನೀ ಆರ್ ಎಸ್ಸೆಸ್ಸೆಫ್ ,ಪೇಜಾವರ ಸ್ವಾಮಿ ಸುನ್ನೀ, ಸೂಲಿಬೆಲೆ ಸುನ್ನೀ, ಮುತಾಲಿಕ್ ಸುನ್ನೀ, ಜಗದೀಶ ಕಾರಂತ ಸುನ್ನೀ, ಪ್ರಭಾಕರ ಭಟ್ಟ ಸುನ್ನೀ, ಬಜರಂಗದಳ ಸುನ್ನೀ ಅಬ್ಬಬ್ಬಾ ಅಬ್ಬಬ್ಬಾ ಇನ್ನೂ ಏನೆಲ್ಲಾ ಹೇಳುತ್ತಾ ನೀವು ತಿರುಗಾಡುತ್ತಿದ್ದಿರಿ?ಎಷ್ಟು ಪ್ರತಿಭಟನೆಗಳು ನಿಮ್ಮ ವತಿಯಿಂದ ನಡೆಯುತ್ತಿದ್ದವು ಹಾ....??*

*ಪೀಪಿ: ಅದೂ ಅದೂ ಅದೂ*

😂😂😂😂😂😂😂😂😂😂😁😁😁😆😆😆😜😜😜😜😂😂😂😂

🖊 👨🏿‍🔧 *ಯೋಹೋ ಸಿಂಟಾ ಸೂಯಿ*

ಕಾಲದ ಬೇಡಿಕೆ ಮುಸ್ಲಿಂ ಐಕ್ಯತೆ ಅಲ್ಲ ಹೊರತು, ನೈಜ ಮುಸ್ಲಿಮ್ ಆಗಿ ಜೀವಿಸುದು.

ಈಗ ಎಲ್ಲಾ ಕಡೆ ಒಂದೇ ಕೂಗು , ಶತ್ರುಗಳು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ನಾವು ಸುನ್ನಿ, ಸಲಪಿ ಅಂತ ಕಚ್ಚಾಡುದನ್ನು ನಿಲ್ಲಿಸಿ ಎಲ್ಲರೂ ಒಂದಾಗ ಬೇಕು.
ನಾವೆಲ್ಲರೂ ಮುಸ್ಲಿಂ ಧರ್ಮದ ಅನುಯಾಯಿಗಳು.
ನಾವು ಒಂದಾದರೆ ನಮ್ಮನ್ನು ಮುಟ್ಟಲು ಯಾರಿಗೂ ಸಾದ್ಯವಿಲ್ಲ.!!

ಇಂತಹ ಮೆಸೇಜ್ಗಳು, ಭಾಷಣಗಳು ನಾವು ಎಷ್ಟೋ ಕೇಳಿ, ನೋಡಿ ಸಾಕಾಗಿದೆ.!!!

*ಐಕ್ಯತೆಯನ್ನು ಜಪಿಸುವವರು ಸ್ವಲ್ಪ ಇದನ್ನು ಓದಿ ನೋಡಿ:*
೧. ಮುಸ್ಲಿಂಗಳ ಮೇಲೆ ದಾಳಿ ನಡೆಯುತ್ತಿರುವುದು ಕೇವಲ ಭಾರತದಲ್ಲಿ ಮಾತ್ರವೇ?

೨. ಸಿರಿಯಾ, ಇರಾಕ್, ಲಿಬಿಯಾ, ಯಮನ್ ನಂತಹ ಮುಸ್ಲಿಂ ಬಾಹುಳ್ಯ ಇರುವ ರಾಷ್ಟ್ರಗಳಲ್ಲಿ ನಡೆಯುತ್ತಿರುವ ದಾಳಿಗಳಿಗೆ ಕಾರಣವೇನು??
ಅಲ್ಲಿ ಮುಸ್ಲಿಮ್ಗಳ ಸಂಖ್ಯೆ ಕಮ್ಮಿ ಇದೆಯೇ??
ಅಥವಾ ನೀವು ಹೇಳುವ ಗ್ರೂಪಿಸಂ ಅಲ್ಲಿ ಇದೆಯೇ?

ಅಲ್ಲಿ ಮುಸ್ಲಿಂ ಸಮುದಾಯದ ಮೇಲೆ ದಾಳಿ ನಡೆಯಲು ಕಾರಣ ಏನು??

*ಈ ತರಹ ಮುಸ್ಲಿಂಗಳ ಮೇಲೆ ಎಲ್ಲಾ ಭಾಗಗಳಲ್ಲಿ ದಾಳಿ ನಡೆಯಲು ಕಾರಣವೇನು??*

*ಇದಕ್ಕೆಲ ಉತ್ತರ ೧೪೦೦ ವರ್ಷಗಳ ಹಿಂದೆ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರು ಹೇಳಿದ್ದಾರೆ!!*

*ಒಮ್ಮೆ ಪ್ರವಾದಿ(ಸ.ಅ) ರು ತಮ್ಮ ಅನುಯಾಯಿಗಳಲ್ಲಿ ಹೇಳಿದರು: ಅಂತ್ಯ ದಿನ ಸಮೀಪಿಸುವಾಗ ನನ್ನ ಉಮ್ಮತ್ತ್ಗಳ ಮೇಲೆ ನಾಲ್ಕು ಕಡೆಗಳಿಂದ ಇಸ್ಲಾಮಿನ ಶತ್ರುಗಳು ಆಕ್ರಮಿಸುವರು.*

ಆವಾಗ ಸ್ವಹಾಬಿಗಳು ಕೇಳುತ್ತಾರೆ: ಯಾಕೆ ಆವಾಗ ಮುಸ್ಲಿಂಗಳ ಸಂಖ್ಯೆ ಕಡಿಮೆ ಇರುತ್ತದೆಯೇ??

*ಪ್ರವಾದಿ ಮುಹಮ್ಮದ್(ಸ.ಅ) ರು ಉತ್ತರಿಸುತ್ತಾರೆ: ಇಲ್ಲ ಕಂಡಿತಾ ಇಲ್ಲ. ಮುಸ್ಲಿಂಮರು ಹೆಚ್ಚಾಗೆ ಇರುತ್ತಾರೆ. ಆದರೆ ಅವರಲ್ಲಿ ಈಮಾನ್ (ವಿಶ್ವಾಸ) ಇರುವರು  ಕಡಿಮೆ ಇರುತ್ತಾರೆ!!*

ನೋಡಿ ಇಲ್ಲಿ!!
ಮುಸ್ಲಿಂ ಧರ್ಮದ ಮೇಲೆ ಈ ರೀತಿಯಲ್ಲಿ ದಾಳಿ ನಡೆಯಲು ಕಾರಣ, ನಮ್ಮಲ್ಲಿ ಈಮಾನಿನ ಕೊರತೆ ಇದೆ. ಎಲ್ಲರ ವಿಶ್ವಾಸ ಒಂದೇ ರೀತಿ ಇಲ್ಲ.!!

*ವಿಶ್ವಾಸ ಸರಿ ಇಲ್ಲದೆ
ನಾವು ಐಕ್ಯವಾಗಿ ಏನು ಪ್ರಯೋಜನ!!*

*ಅಲ್ಲಾಹನ ಸಹಾಯ ಬೇಕಲ್ಲವೇ! ಪ್ರವಾದಿ ಮುಹಮ್ಮದ್ (ಸ.ಆ) ರ ನೋಟ ಬೇಕಲ್ಲವೇ!!
ಅಲ್ಲಾಹನ ಸಹಾಯ ಇಲ್ಲದೆ ನಾವು ವಿಜಯ ಹೊಂದಲು ಸಾಧ್ಯವೇ??*

*ಆದ್ದರಿಂದ ಕಾಲದ ಬೇಡಿಕೆ  ಐಕ್ಯತೆ ಅಲ್ಲ ಹೊರತು ನಾವು ನೈಜ ಮುಸ್ಲಿಂ ಆಗಿ ಜೀವಿಸುವುದು!!*

*ಇನ್ನು ಐಕ್ಯತೆ ಯಾರೊಂದಿಗೆ??*
೧. ನಮ್ಮ ಪ್ರವಾದಿ ಮುಹಮ್ಮದ್ (ಸ.ಅ) ರನ್ನು ಸಾಧಾರಣ ಮನುಷ್ಯ ಎಂದು ಹೇಳುವವರೊಂದಿಗೆಯ??

೨. ನಮಗೆ ಸೌದಿಯ ಆಡಳಿತ ಸಿಕ್ಕಿದರೆ ಮೊದಲು ಮಾಡುವ ಕೆಲಸ , ಪವಿತ್ರ ರೌಲಾವನ್ನು ಕೆಡವುದು ಅಂತ ಹೇಳಿದ ಯಹೂದಿ ಏಜೆಂಟ್ ಗಳೊಂದಿಗೆ ಯಾ???

೩. ಇಸ್ಲಾಂ ಧರ್ಮದ ನಿಲವಿಗಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ, ಸ್ವಹಾಬಿಗಳು ಹಾಗೂ ಮಹಾತ್ಮರುಗಳ ಖಬರ್ ಗಳನ್ನು ನಾಶ ಮಾಡಿದ ಈ ವಹ್ಹಾಬಿ ಗಳೊಂದಿಗೆ ಐಕ್ಯತೆ ಮಾಡ ಬೇಕೇ??

೪. ವಹ್ಹಾಬಿಸಂನ ಹೆಸರಲ್ಲಿ ಯಹೂದಿಗಳೊಂದಿಗೆ ಸೇರಿಕೊಂಡು ಸಿರಿಯಾ , ಇರಾಕ್ ನಂತಹ ಮುಸ್ಲಿಂ ರಾಷ್ಟಗಳಲ್ಲಿ ಅಭದ್ರತೆ ಸೃಷ್ಟಿಸಿ, ಲಕ್ಷಾಂತರ ಮುಸ್ಲಿಂರ ಮಾರಣ ಹೋಮಕ್ಕೆ ಕಾರಣರಾದ ಈ ನೂತನವಾದಿಗಳೊಂದಿಗೆ ಐಕ್ಯತೆ ಸಾಧ್ಯವೇ??

೫. ಮುಖ್ಯವಾಗಿ ಪ್ರವಾದಿ ಮುಹಮ್ಮದ್ (ಸ.ಅ) ರು ೧೪೦೦ ವರ್ಷಗಳ ಹಿಂದೆಯೇ ನಮಗೆ ಇಲ್ಲಿ ಇಸ್ಲಾಂ ಅನ್ನು ಪರಿಪೂರ್ಣವಾಗಿ ನೀಡಿ ಹೋಗಿದ್ದಾರೆ.
ಪ್ರವಾದಿ ಮುಹಮ್ಮದ್ (ಸ.ಅ) ರ ಮೂಲಕ, ಅವರ ಅನುಯಾಯಿಗಳ ಮೂಲಕ ಪಾರಂಪರಿಕವಾಗಿ ನಮಗೆ ತಲುಪಿದೆ.
ಅದರಲ್ಲಿ ಯಾವುದೇ ತಿದ್ದುಪಡಿಗೆ ಅವಕಾಶವಿಲ್ಲ.

ಆದರೆ ಈ ನೂತನವಾದಿಗಳು ತಮಗೆ ಬೇಕಾದ ಹಾಗೆ ತಿದ್ದುಪಡಿ ಮಾಡುತ್ತಿದ್ದಾರೆ!!

ಈಗ ಹೇಳಿ, ಇಲ್ಲಿ ಇಸ್ಲಾಂನ ನಿಜವಾದ ಶತ್ರುಗಳು ಯಾರು??

*ಇಸ್ಲಾಂನ ಸುಂದರ ಆಶಯಗಳನ್ನು ನಾಶ ಮಾಡುತ್ತಿರುವ,*
*ಈ ಯಹೂದಿ ಏಜೆಂಟ್ಗಳಾದ ನೂತನವಾದಿಗಳೊಂದಿಗೆ ಐಕ್ಯತೆ ಸ್ಥಾಪಿಸಲು ಒಬ್ಬ ನೈಜ ಮುಸಲ್ಮಾನನಿಂದ ಸಾಧ್ಯವೇ??*

*ಇವರೊಂದಿಗೆ ಐಕ್ಯವಾದರೆ ಅಲ್ಲಾಹನ ಸಹಾಯ ಸಿಗಬಹುದೇ? ಪ್ರವಾದಿ ಮುಹಮ್ಮದ್ (ಸ.ಅ) ರು ಇಷ್ಟ ಪಡುತ್ತಾರೆಯೇ??*

ಐಕ್ಯತೆ ಎಂದು ಬೊಬ್ಬೆ ಹಾಕುವ ಮೊದಲು , ನಿಜವಾದ ಮುಸ್ಲಿಂ ಆಗಿ. ಈಮಾನ್ ವಿಶ್ವಾಸ ದೃಡಗೊಳಿಸಿ!!

*ಪ್ರವಾದಿ ಮುಹಮ್ಮದ್ (ಸ.ಅ) ಕಲ್ಪಿಸಿದ ಕಾರ್ಯಗಳನ್ನು ನಿರ್ವಹಿಸಿ, ಅವರು ವಿರೋಧಿಸಿದ ಕಾರ್ಯಗಳಿಂದ ದೂರವಿರಿ.*
ಆವಾಗ ಅಲ್ಲಾಹನ ಸಹಾಯ ನಮಗೆ ಇರುತ್ತದೆ.

ಅದು ಬಿಟ್ಟು ಈಮಾನ್ (ವಿಶ್ವಾಸ )
ನಾಶ ಮಾಡುವವರೊಂದಿಗೆ ಸೇರಿಕೊಂಡು ನೀವು ಐಕ್ಯತೆ ಮಾಡಿದರೆ, ಅಲ್ಲಾಹನ ಸಹಾಯ ಕಂಡಿತ ಇರುವುದಿಲ್ಲ.

ಈ ತರಹದ ಐಕ್ಯತೆಗೆ ಈಮಾನ್ ಇರುವ ಒಬ್ಬ ಸತ್ಯ ವಿಶ್ವಾಸಿ ಕೂಡ ಸಿಗಲಾರ.

*ಒಮ್ಮೆ ನಿಮ್ಮ ಹೃದಯ ಮೇಲೆ ಕೈ ಇಟ್ಟು ನಿಶ್ಕಲಂಕವಾಗಿ ಚಿಂತಿಸಿ. ಚಿಂತಿಸುವವರಿಗೆ ಇಲ್ಲಿ ದೃಷ್ಟಾಂತಗಳಿವೆ.*


*ಇನ್ನೂ ಕೂಡ ನಿಮಗೆ ಈ ವಹ್ಹಾಬಿಗಳೊಂದಿಗೆ ಐಕ್ಯತೆ ಬೇಕು ಅಂತ ಎನಿಸಿದರೆ, ನೀವು ನಿಮ್ಮ ಐಕ್ಯತೆ ಇಟ್ಟುಕೊಳ್ಳಿ, ನಾವು ನಮ್ಮ ಈಮಾನ್ ಇಟ್ಟುಕೊಳ್ಳುತ್ತೇವೆ.*

👍🏻👍🏻👍🏻👍🏻👍🏻👍🏻

*Haneef Ullal*

Wednesday, 4 October 2017

ಜಾಕಿರ್ ನಾಯ್ಕ್ ಇಶ್ಯೂ* *ಮದೀನಾ ಹಸಿರು ಖುಬ್ಬಾ ಈಗಲೂ ಅವರಿಗೆ ತಲೆನೋವಾಗಿ ಕಾಡುತ್ತಿದೆ* *ವಹ್ಹಾಬಿಸಂ ಇಸ್ಲಾಂ ಎಂದು ನಂಬುವವರಿಗೂ ನಂಬಿಸುವವರಿಗೂ ಇದೊಂದು ಪಾಠವಾಗಲಿ

*ಜಾಕಿರ್ ನಾಯ್ಕ್ ಇಶ್ಯೂ*
*ಮದೀನಾ ಹಸಿರು ಖುಬ್ಬಾ ಈಗಲೂ ಅವರಿಗೆ ತಲೆನೋವಾಗಿ ಕಾಡುತ್ತಿದೆ*
*ವಹ್ಹಾಬಿಸಂ ಇಸ್ಲಾಂ ಎಂದು ನಂಬುವವರಿಗೂ ನಂಬಿಸುವವರಿಗೂ ಇದೊಂದು ಪಾಠವಾಗಲಿ*

👇ಮುಂದೆ ಓದಿ....

Isis ನ ಹುಟ್ಟು ಮತ್ತು ಕಾರ್ಯವ್ಯಾಪ್ತಿ ಯಹೂದಿಗಳಿಂದ ಎಂದು ನಾವು ನಂಬುವುದರ ಜೊತೆ ಜೊತೆಗೆ ಸಳಪಿಯಾದಿ ವಹ್ಹಾಬಿಸಂನ್ನು ಕೂಡಾ ಇಲ್ಲಿ ಹೈಲೇಟ್ ಮಾಡಿದ್ದು ಹಂಪರ್ ಎಂಬ ಒಬ್ಬ ಯಹೂದಿ ಎಂಬುದನ್ನು ನಾವು ಮೆರೆಯಬಾರದು.ಅದೇ ವಹ್ಹಾಬಿಸಂ ಆಶಯ ಪ್ರಚಾರಕ್ಕಾಗಿ ದೈವದತ್ತವಾಗಿ  ಸಿಕ್ಕಿದ ಎಲ್ಲಾ ಅನುಗ್ರಹಗಳನ್ನು ದಾರೆಯೆರೆದ ವ್ಯಕ್ತಿಯಾಗಿದ್ದಾರೆ ಡಾ ಝಾಕಿರ್ ನಾಯ್ಕ್.

ಆದ್ಯಾತ್ಮಿಕತೆ ಇಲ್ಲದ ಒಣ ಇಸ್ಲಾಮನ್ನು ಪ್ರಚಾರ ಮಾಡುವ ನಾಯ್ಕ್,ದರ್ಗಾ ಗಳನ್ನು ನಂಬುವ ಬಹುಸಂಖ್ಯಾತ ಸುನ್ನೀ ಮುಸ್ಲಿಮರನ್ನು ಮುಶ್ರಿಕ್ ಮತ್ತು ಕುರಾನ್ ವಿರುದ್ದರೆಂಬ ಹಣೆ ಪಟ್ಟ ಕಟ್ಟಿ ಆರೋಪಿಸುತ್ತಾರೆ.
ಅದೇನು 'ಮುಶ್ರಿಕ್' ಎಂಬ ಆರೋಪ 'ಭಯೋತ್ಪಾದಕ' ಆರೋಪಕ್ಕಿಂತ ಸಣ್ಣದೇನು ಅಲ್ಲ. ಭಯೋತ್ಪಾದನೆಗೆ ದುನಿಯಾ ಮತ್ತು ಪರಲೋಕದಲ್ಲಿ ಫನಿಶ್ಮೆಂಟ್ ಸಿಗುವುದಾದರೆ, ಮುಶ್ರಿಕ್ ಗೆ ಆಖಿರದಲ್ಲಿ ಭಯಾನಕ ನರಕ ಶಿಕ್ಷೆ ಎಂಬುದರಲ್ಲಿ ಸಂಶಯವಿಲ್ಲ.

ಕುರಾನನ್ನು ದುರ್ವ್ಯಖ್ಯಾನ ಮಾಡಿ ಸುನ್ನೀ ಮುಸ್ಲಿಮರನ್ನು ಮುಶ್ರಿಕ್ ಎಂದು ಆರೋಪಿಸಿದ ಜಾಕಿರ್ ನಾಯ್ಕ್ ಗೆ ಇದೀಗ ಅವರ ಪ್ರಭಾಷಣವೇ ತಿರುಗು ಬಾಣವಾಗಿದೆ!
ಅಂದರೆ ಅವರ ಭಾಷಣವನ್ನೇ ದುರ್ವ್ಯಖ್ಯಾನ ಮಾಡಿ 'ಭಯೊತ್ಪಾದಕ' ಎಂದು ಆರೋಪಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಅಥವಾ ನಾಯ್ಕ್ ಕುರಾನನ್ನು ತಪ್ಪಾಗಿ ಅರ್ಥೈಸಿ ವಹ್ಹಾಬಿಯಾದಂತೆ ಅವರ ಭಾಷಣವನ್ನು ಬಾಂಗ್ಲಾದಲ್ಲಿ ಸೆರೆಯಾದ ಉಗ್ರ ತಪ್ಪಾಗಿ ಅರ್ಥೈಸಿ ಭಯೋತ್ಪಾದಕನಾಗಿದ್ದಾನೆ!

ಉಗ್ರವಾದ ಮತ್ತು ಭಯೋತ್ಪಾದನೆ ನಂಟು ವಹ್ಹಾಬಿಸಂನ ಹುಟ್ಟಿನಿಂದಲೇ ಅಂಟಿಕೊಂಡ ಜಿಗುಟಾಗಿದೆ.
ಅದರ ಭಾಗವಾಗಿ 2015 ಜೂನ್ 27ರಂದು ಈಜಿಪ್ಟ್ ಸಹಿತ ಹಲವಾರು ಮುಸ್ಲಿಮ್ ರಾಷ್ಟ್ರ ಗಳು ವಹ್ಹಾಬಿಸಂ ಗ್ರಂಥಗಳು ಮತ್ತು ಸಿಡಿ ಗಳಿಗೆ ತಮ್ಮ ರಾಜ್ಯದಲ್ಲಿ ನಿಷೇಧ ಹೇರಿದ್ದನ್ನು ಸ್ಮರಿಸಬಹುದು.
ಮಾತ್ರವಲ್ಲ ಹಂಪರ್ ಪರಂಪರೆಯ ಫ್ರೊಡಕ್ಟ್'ಗಳಾದ ವಹ್ಹಾಬಿಸಂ ಮತ್ತು ಐಸಿಎಸ್ ಪುಡಿಗೈದ ದರ್ಗಾಗಳಿಗೆ ಲೆಕ್ಕವಿಲ್ಲ.ಅತೀ ಕ್ರೂರವಾಗಿ ಕೊಂದು ಹಿಸುಕಿ ಹಾಕಿದ ಮುಸ್ಲಿಮರ ಸಂಖ್ಯೆಗೆ ಮಿತಿ ಇಲ್ಲ. ಈ ವರ್ಷ ವಹ್ಹಾಬಿಸಂ ನ ನವನೂತನ ವಾದವಾದ ತರಾವೀಹ್ ನಿಷೇಧವನ್ನು Isis ಎತ್ತಿ ಹಿಡಿದು ಫತ್ವಾ ಕೊಟ್ಟದ್ದು ಎಲ್ಲಾ ಮೀಡಿಯಗಳು ವರದಿ ಮಾಡಿತ್ತು.
ಪವಿತ್ರ ಕಾಬಾವನ್ನು ದರೋಡೆಗೈದು ಅಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಲೂಟಿಮಾಡಿ ತವಾಫ್ ಮಾಡುತ್ತಿದ್ದ ಮುಸ್ಲಿಮರನ್ನು ಕೊಂದುಹಾಕಿ ಮದೀನಾದಲ್ಲಿದ್ದ ಸಹಾಬಿಗಳ ದರ್ಗಾಗಳನ್ನು ಧ್ವಂಸಮಾಡಿ ನರತಾಂಡವ ನೃತ್ಯವನ್ನಾಡುವ ಮೂಲಕ ವಹ್ಹಾಬಿ ಭಯೋತ್ಪಾದಕರು ತಮ್ಮ ಆಶಯ ಪ್ರಚಾರಕ್ಕೆ ಮುನ್ನುಡಿ ಬರೆದದ್ದು ಇತಿಹಾಸ.

ಅಂದು ವಿಶ್ವ ಮುಸ್ಲಿಮರ ಪ್ರತಿಭಟನೆ ಮಾಡಿದ ನಿಮಿತ್ತ ಪವಿತ್ರ ರೌಲಾ ಶರೀಫ್ ದರ್ಗಾದ ಮೇಲೆ ತಲೆ ಎತ್ತಿ ನಿಂತಿರುವ ಹಸಿರು ಖುಬ್ಬಾವನ್ನು ಹೊಡೆದುರುಳಿಸಲು ಸಳಪಿಗಳಿಗೆ ಸಾಧ್ಯವಾಗಿಲ್ಲ.
ಈಗಲೂ ಅವರಿಗೆ ಅದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಅದನ್ನು ಹೊಡೆದುರುಳಿಸಲು ಹೊಂಚು ಹಾಕುತ್ತಾ ಇದ್ದಾರೆ.
ಮಲ್ಲು ಸಳಪಿ ಝಕರಿಯಾ ಸಲಾಹಿ ತನಗೆ ಸೌದಿ ಅಧಿಕಾರ ಸಿಕ್ಕಿದರೆ ಮೊತ್ತ ಮೊದಲನೆಯದಾಗಿ ಮುತ್ತು ನೆಬಿಯವರ ದರ್ಗಾದ ಮೇಲಿರುವ ಹಸಿರು ಖುಬ್ಬಾವನ್ನು ಹೊಡೆದುರುಳಿಸುವ ತನ್ನ ನೀಚ ಇಂಗಿತವನ್ನು ಬಹಿರಂಗ ಪಡಿಸಿದ್ದಾನೆ!!
.
ಅದೇ ಗುರಿಯನ್ನಿಟ್ಡು Isis ಉಗ್ರ ಮೊನ್ನೆ ಮದೀನಾದ ರೌಲಾ ಶರೀಫ್ ಗೆ ನುಗ್ಗಿ ಹಸಿರು ಖುಬ್ಬಾವನ್ನು ಹೊಡೆದುರುಳಿಸುವ ಪ್ರಯತ್ನಕ್ಕೆ ಕೈ ಹಾಕಿ ಭದ್ರತಾ ಪಡೆಯ ಕೈಗೆ ಸಿಕ್ಕಿ ತನ್ನನ್ನೇ ತಾನು ಸ್ಪೋಟಿಸಿ ನಾಯಿಯಂತೆ ಸತ್ತಿದ್ದಾನೆ.

ಸಂಕ್ಷಿಪ್ತವಾಗಿ ಹೇಳುವುದಾದರೆ Isis ಮತ್ತು ವಹ್ಹಾಬಿಸಂನ ಇತಿಹಾಸ ಹಾಗೂ ಭೀಕರ ತಾಂಡವದ ಚರಿತ್ರೆ ವೀಕ್ಷಿಸುವಾಗ ಎರಡೂ ಒಂದೇ ನಾಣ್ಯದ ಎರಡು ಮುಖವೆಂದು ಮನವರಿಕೆಯಾಗುತ್ತದೆ.

ಅಂತಹ ವಹ್ಹಾಬಿಸಂನ್ನು ಬೆಂಬಲಿಸುವ ಝಾಕಿರ್ ನಾಯ್ಕ್ ರ ವಿರುದ್ದ ಭಯೋತ್ಪಾದನೆಯ ಆರೋಪ ಬಂದಿರುವುದು ಆಶ್ಚರ್ಯ ಪಡುವಂತಹ ವಿಷಯವೇನು ಅಲ್ಲ.

ವಹ್ಹಾಬಿಸಂನ್ನು ನೂರು ವರ್ಷಗಳ ಕಾಲ ಅನ್ನ ಆಹಾರ ಕೊಟ್ಟು ಬೆಳೆಸಿದ್ದು ಸೌದೀಅರೇಬಿಯಾ ಸರಕಾರವಾಗಿತ್ತು.
ಲಾದೆನ್ ನೇತೃತ್ವದ ಅಲ್ ಖಾಯಿದಾ ಉಗ್ರವಾದಿಗಳು ಜಿದ್ದಾ ದಲ್ಲಿ ಬಾಂಬ್ ಸ್ಪೋಟಿಸಿ ಸರೆ ಸಿಕ್ಕಾಗ ಹಾಲು ಕೊಟ್ಟ ಕೈಗೆ ಕಚ್ಚುವ ಸರ್ಪವಾಗಿತ್ತು ವಹ್ಹಾಬಿಸಂ ಎಂದು ಸೌದಿಸರಕಾರಕ್ಕೆ ಮನದಟ್ಡಾಯಿತು.
ಕಾರಣ ಸರೆ ಸಿಕ್ಕ ಉಗ್ರರು ಅದೇ ಊರಿನ ವಹ್ಹಾಬಿಗಳಾಗಿದ್ದರು!!

ಆದ್ದರಿಂದಲೇ ಅಲ್ಲಿನ ಸರಕಾರ ಅವರ ಮೇಲೆ ನಿಯಂತ್ರಣ ಹಾಕಿದೆ.ಅದರ ಭಾಗವೆಂಬಂತೆ ಕಳೆದ ವರ್ಷ ಅಲ್ಲಿನ ಸರಕಾರ ಮುತವ್ವ ಪೋಲಿಸ್ ಗಳ ಕೈ ಕಟ್ಟಿ ಹಾಕಿದೆ!
ಮುಂಚೆ ಅವರಿಗಿದ್ದ ಎಲ್ಲಾ ಅಧಿಕಾರಗಳನ್ನು ತಡೆ ಹಿಡಿಯಲಾಗಿದ್ದರಿಂದಲೇ ಸೌದಿಯ ಮುತವ್ವಗಳು ಹಲ್ಲಿಲ್ಲದ ಹಾವಿನಂತೆ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಇಂದು ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಎಲ್ಲಾ ಅರಾಜಕತೆಗೆ ನೇತೃತ್ವ ಕೊಡುವವರಿಗೆ  ಸಳಪಿಸಂ ಮತ್ತು ಬ್ರದರ್ ಹುಡ್ ನಂತಹ ಮಾರಿ ಸಂಘಟನೆಗಳೊಂದಿಗೆ ನೇರ ಅಥವಾ ಪರೋಕ್ಷ ಸಂಭಂದವಿದೆ.

ಆದ್ದರಿಂದಲೇ ಭಾರತದ ಫ್ಯಾಶಿಸಂ ಸಂಘಟನೆಗಳು ಹಿಂದೂ ಧರ್ಮದ ಮುಖವನ್ನು ಹಿಂಸಾತ್ಮಕವನ್ನಾಗಿ ಪರಿವರ್ತಿಸಿದಂತೆ ಸಳಪಿಯಾದಿ ವಹ್ಹಾಬಿಸಂ ಇಸ್ಲಾಮನ್ನು ಭಯೋತ್ಪಾದನೆಯ ಧರ್ಮವನ್ನಾಗಿ ಬದಲಾಗಿಸಿದ್ದಾರೆ.

ಬಜರಂಗ ದಳದಂತಹ ಫ್ಯಾಸಿಶಂ ಶಕ್ತಿಗಳು ಝಾಕಿರ್ ನಾಯ್ಕ್ ನ ವಿರುದ್ದ ಹೇಳಿಕೆ ಕೊಡುತ್ತಿರುವುದರಿಂದಲೇ ಇದೊಂದು ಹಿಂದು ಮುಸ್ಲಿಂ ಇಶ್ಯುವನ್ನಾಗಿ ಪರಿವರ್ತಿಸಿ ಅನುಕಂಪದ ಅಲೆ ಸೃಷ್ಡಿಸುವ ಅಗತ್ಯ ಇಲ್ಲ.

ಬಾಂಗ್ಲಾದಲ್ಲಿ ಸ್ಪೋಟ ನಡೆಯುತ್ತದೆ ಅದರಲ್ಲಿ ಸೆರೆ ಸಿಕ್ಕ ಉಗ್ರರು ಜಾಕಿರ್ ನಾಯ್ಕ್ ನ ಹೆಸರು ಬಹಿರಂಗ ಪಡಿಸುತ್ತಾರೆ
ಬಂಗ್ಲಾ ಸರಕಾರ ಭಾರತದೊಂದಿಗೆ ಅನ್ವೇಷಣೆ ನಡೆಸಲು ರಿಕ್ವೆಸ್ಟ್ ಮಾಡುತ್ತದೆ.
ಅದರಂತೆ ಕೇಂದ್ರ ಗೃಹ ಮಂತ್ರಿ ತನಿಖೆ ನಡೆಸುವಂತೆ  ಆದೇಶಿಸುತ್ತಾರೆ.
ತನಿಖೆ ನಡೆಯಲಿ ಸತ್ಯ ಸಂಗತಿ ಹೊರಬರಲಿ....
ಜೊತೆಗೆ ವಹ್ಹಾಬಿಸಂ ಇಸ್ಲಾಂ ಎಂದು ನಂಬುವ,ನಂಬಿಸುವ ಎಲ್ಲರಿಗೂ ಇದೊಂದು ಪಾಠವಾಗಲಿ...

ಓರ್ವ ಕಟ್ಟಾ ಸುನ್ನೀ....

ವಹ್ಹಾಬಿ

ಮುಸ್ಲಿಂ ಉಮ್ಮತ್ ಎಂಬ ಹೆಸರಿನಲ್ಲಿ ಸಲಫೀ ಭಯೋತ್ಪಾದನೆಯನ್ನು ಬೆಂಬಲಿಸಿದ ನಕಲಿ ಸಮುದಾಯ ಪ್ರೇಮಿಯೊಬ್ಬನ ಅಸಲಿ ಕಥೆಯನ್ನು ನಾವು ಹೇಳುತ್ತಿದ್ದೇವೆ. ಈತ ಬರೆಯುವುದು ನೋಡಿ..

-ನಕಲಿ
*ಮುಸ್ಲಿಂ ಸಮುದಾಯದ ಒಗ್ಗಟ್ಟನ್ನು ಮುರಿಯಲು ಪ್ರಯತ್ನ ಪಡುತ್ತಿರುವ MRM ನಕಲಿ ಮುಸ್ಲಿಮರು*.........

*ಉತ್ತರ:*
ತಾಕತ್ತಿದ್ದರೆ ಸುನ್ನಿಗಳಾದ ನಮನ್ನು M.R.Mನ ಕಾರ್ಯಕರ್ತರೆಂದು ಸಾಬೀತು ಪಡಿಸಿ. ಸುಳ್ಳು ಹೇಳಿ ಸಲಫಿಗಳೆಂಬ ಅಟ್ಟಹಾಸಿಗಳು ನಡೆಸಿದ ಕೃತ್ಯವನ್ನು ಪರಿಶುದ್ದಗೊಳಿಸುವ ಪ್ರಯತ್ನಗಳು ಇನ್ನು ಮುಸ್ಲಿಂ ಸಮಾಜದಲ್ಲಿ ನಡೆಯದು. ಫಿತ್ನಾದ ಪೀಪಿಗಳೇ ಧರ್ಯವಿದ್ದರೆ, ದಮ್ಮಿದ್ದರೆ ನೀವು ಆರೋಪಿಸುವ ಆರೋಪವನ್ನು ಸಾಬೀತು ಮಾಡಿ. ಅದು ಪುರುಷತ್ವ. ಅದು ಬಿಟ್ಟು ವಾಟ್ಸಾಪ್‌ಗಳಲ್ಲಿ ಗೀಚುವುದು ದೊಡ್ಡ ಕೆಲಸವೇನಲ್ಲ...

-ನಕಲಿ
       *ಹೌದು ಇಂತಹಾ ಹೆಡ್  ಲೈನ್ ಕೊಡಲು ಕಾರಣವಿದೆ.*

*-ಉತ್ತರ*
ಹೌದು ಇಂಥ ಹೆಡ್ ಲೈನ್ ಕೊಡಲಿರುವ ಏಕೈಕ ಕಾರಣವೇ ಸಲಫಿಗಳ ಮುಖವಾಡ ಈಗ ಕಳಚಿ ಬಿದ್ದಿರುವುದು. ಮಂಗಳೂರಿನ ವಹ್ಹಾಬೀ ಪಾಳಯದಲ್ಲಿ ಅಭಧ್ರತೆ ಸೃಷ್ಟಿಯಾಗಿದೆ. ವಹ್ಹಾಬೀ ಪುಡಾರಿಗಳಿಗೆ ಒಂದೆಡೆ ಸಮುದಾಯದಿಂದ ಛೀಮಾರಿ ಮತ್ತು ಕಾನೂನಿನ ಭಯದ ಬಿಸಿ ಮುಟ್ಟಿದೆ. ಆದ್ದರಿಂದ ಸಮುದಾಯದ ಸಾಮಾನ್ಯರ ಕಣ್ಣಿಗೆ ಪುಡಿ ಹಾಕಿ, ತಮ್ಮ ಕಳಂಕವನ್ನು ಮರೆಮಾಚಬೇಕು.  ಆದ್ದರಿಂದ  ಇಂಥ ಹೆಡ್‌ಲೈನ್ ಈಗ  ಸಮುದಾಯ ರಕ್ಷಕರಿಗೆ ಅನಿವಾರ್ಯವಾಗಿದೆ.

-ನಕಲಿ
*ಯಾಕೆಂದರೆ ಮುಸ್ಲಿಂ ಸಮೂದಾಯದ ಮೇಲೆ ಅಪ ಪ್ರಚಾರ ಇಂದು ನಿನ್ನೆಯದಲ್ಲ,ಮುಂದೆಯೂ ಕಂಡಿತಾ  ಇರುತ್ತದೆ*

*-ಉತ್ತರ*
ಹೌದು ಖಂಡಿತಾ...  ವಹ್ಹಾಬಿಸಂ ಎಂಬ ಶನಿ ಸಂತಾನ ಯಾವಾಗ ಹುಟ್ಟಿಕೊಂಡಿತೋ ಆವಾಗಿನಿಂದ ಮುಸ್ಲಿಂ ಸಮುದಾಯವು ಜಗತ್ತಿನಲ್ಲಿ ಆರೋಪಗಳಿಗೆ ತುತ್ತಾಗತೊಡಗಿತು. ಈ ಶನಿ ಸಂತಾನಿಗಳು ಎಲ್ಲಿವರೆಗಿರುತ್ತಾರೋ ಆ ತನಕ ಮುಸ್ಲಿಂ ಸಮುದಾಯವು ಭಯೋತ್ಪಾದನೆಯ ಆರೋಪವನ್ನು ಎದುರಿಸುತ್ತಲೇ ಇರುತ್ತದೆ.

-ನಕಲಿ
*ಕಾರಣ ನಮ್ಮೊಳಗಿನ ಸಂಘಟನಾ ಕಚ್ಚಾಟ , ಕೆಸರೆರಚಾಟ.*

*ಉತ್ತರ*
ಯಾವುದೇ ಭಿನ್ನತೆಯಿಲ್ಲದೆ ಐಕ್ಯತೆಯಿಂದಿದ್ದ ಮುಸ್ಲಿಮರ ನಡುವೆ ಶಿರ್ಕ್-ಕುಫ್ರ್ ಎಂಬ ಭಿನ್ನತೆಯ ಬೀಜವನ್ನು ಬಿತ್ತಿದ ವಹ್ಹಾಬಿಗಳು ಸಮುದಾಯದಲ್ಲಿ ಹಲವಾರು ಸಂಘಟನೆಯನ್ನೂ, ಪಾಳಯಗಳನ್ನೂ ಉಂಟು ಮಾಡಿದರು. ಈಗ ಅದೇ ಪಾಳಯದೊಳಗಿನ ಕಚ್ಚಾಟವೇ ವಹ್ಹಾಬಿ ನಾಯಕನಿಂದ, ವಹ್ಹಾಬಿಸಂನ ದಮ್ಮಾಜ್ ಸಂಬಂಧವು ಬಹಿರಂಗವಾಗಿದೆ.. ಈಗ ಸಂಘಟನಾ ಸಂಘರ್ಷ ನಡೆಸಿದವರು ಯಾರೆಂಬುದು ತಿಳಿಯಿತಲ್ವಾ.?

-ನಕಲಿ
     *ಯಾಕೆಂದರೆ ಇಂದು ಕನ್ನಡ ಟಿವಿ ವಾಹಿನಿಯಲ್ಲಿ  ಒಂದು ವಾರ್ತೆ  ಪ್ರಸಾರವಾಗುತ್ತೆ  ಅದೇನೆಂದರೆ ಬಿ.ಸಿ.ರೋಡ್ ಪಕ್ಕದಲ್ಲಿರುವ ಒಂದು  ಮಸೀದಿಯಲ್ಲಿ ಉಗ್ರರ  ಚಟುವಟಿಕೆ  ನಡೆಯುತ್ತಿದೆ ಎಂದು*.

*-ಉತ್ತರ*
ಅಲ್ಲಿ ನಡೆಯುತ್ತಿಲ್ಲವಾದರೆ ನಿಮಗೇಕೆ ಭಯ.? ನಿಮ್ಮ ಮುಖಂಡನೇ ಮಾಡಿದ ಆರೋಪದ ತಿರುಳೇನು.? ಹಲವು ವರ್ಷಗಳ ಕಾಲ ಆತ ನಮ್ಮ ನೇತಾರನೆಂದು ತಲೆ ಮೇಲೆ ಹೊತ್ತ ನಿಮ್ಮ ಪಾದ್ರಿಯೇ ಮಾಡುವ ಆರೋಪವನ್ನೇಕೆ ನೀವು ಒಪ್ಪುತ್ತಿಲ್ಲ.. ಅಷ್ಟಕ್ಕೂ ಆತನೀಗ ನಿಮಗೆ ಶತ್ರುವಾದನೇ..?

-ನಕಲಿ
    *ಅಸಲಿಗೆ ಇಂತಹಾ ತಪ್ಪು ಸಂದೇಶ ಮಾಧ್ಯಮಕ್ಕೆ ನೀಡಿದವರಾರು..? ಅದು ಬೇರಾರು  ಅಲ್ಲ ಮುಸ್ಲಿಂ ಸಮೂದಾಯಕ್ಕೆ ಗೊತ್ತಿದೆ.*

*ಉತ್ತರ*
ಹೌದು ನಿಮ್ಮ ವಹ್ಹಾಬಿ ಮುಖಂಡನೆಂದು ಎಲ್ಲರಿಗೂ ಈಗ ಗೊತ್ತಾಗಿದೆ.

-ನಕಲಿ
*ಆ ಮಸೀದಿಯನ್ನು ಪ್ರರಂಬದಿಂದಲೂ ಒಂದಿಲ್ಲೊಂದು, ಒಂದಿಲ್ಲೊಂದು ಕಾರಣ ಹೇಳಿ ಅದನ್ನು ತಡೆಯಲು MRM ಮುಖಾಂತರ ಷಡ್ಯಂತರ ನಡೆಯಿತು*

*ಉತ್ತರ*
ವಹ್ಹಾಬಿಗಳ ಬಹಿರಂಗ ವೇದಿಕೆಯಲ್ಲೇ ಮಕ್ಕಳ ಕತ್ತು ಹಿಸುಕಿ ಕೊಲ್ಲಲು, ಮುಸ್ಲಿಯಾರರನ್ನು ಹೊಡೆದು ಹಾಕಲು, ದರ್ಗಾ, ರೌಳಾವನ್ನು ಕೆಡವಿ ಹಾಕಲು ಕರೆ ನೀಡುವಾಗ, ಕೇವಲ ವಹ್ಹಾಬಿಗಳು ಮಾತ್ತವಿರುವ ಮಸೀದಿಯಲ್ಲಿ ಇನ್ನೆಷ್ಟು ಕಠೋರವಾದ ಕ್ಲಾಸ್ ನಡೆಯಬಹುದೆಂಬುದರಲ್ಲಿ ಯಾರಿಗೆ ತಾನೇ ಅನುಮಾನವಿದೆ.

-ನಕಲಿ
      *ಕೊನೆಗೆ ಯಾವುದರಲ್ಲೂ ಜಯ ಕಾಣದ ಇವರು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುವ ಮಾಧ್ಯಮವನ್ನು ಬಳಸಿಕೊಂಡು ಷಡ್ಯಂತ್ರ ಮಾಡಲು ಶುರು ಹಚ್ಚಿಕೊಂಡರು*.

*-ಉತ್ತರ*
ಭಯೋತ್ಪಾದನೆಗಿಂತ ಕಠೋರವಾದದ್ದನ್ನೇನೂ ಮಾಧ್ಯಮಗಳು ಮಾಡಿಲ್ಲ. ಮಾಧ್ಯಮಗಳು ತಪ್ಪು ಮಾಡಿದ್ದರೆ ಅದಕ್ಕೆ ಅವುಗಳೇ ಹೊಣೆ. ಸಮಾಜದಲ್ಲಿ ಬಾಹಿರವಾದ ಕೆಲಸವನ್ನು ಮಾಡಲು ಹೊರಟವರಿಗೆ ಇಲ್ಲಿನ ಮಾಧ್ಯಮಗಳ ಮೂಲಕ ಬಿಸಿ ಮುಟ್ಟಿಸುವುದು ಸಂವಿಧಾನದಲ್ಲಿರುವ ಹಕ್ಕು..

-ನಕಲಿ
      *ಇಂತಹಾ ನಕಲಿ ಮುಸ್ಲಿಂ ನಾಮದಾರಿಗಳನ್ನು ಮುಸ್ಲಿಂ ಸಮೂದಾಯ ಒಗ್ಗಟ್ಟಾಗಿ ಇವರನ್ನು ಗುರುತಿಸಿ ಇವರ ನಿಜ ಬಣ್ಣ ಬಯಲು ಮಾಡಬೇಕು*

*ಉತ್ತರ*
ಪ್ರಜ್ಞಾವಂತ ಮುಸ್ಲಿಮರು ಮತ್ತು ಉಲಮಾಗಳ ಹಲವು ಕಾಲದಿಂದ ಈ ಮಾತನ್ನು ಹೇಳುತ್ತಲೇ ಬಂದಿದ್ದಾರೆ. ಇವರ ಬಗ್ಗೆ ಜಾಗೃತಿ ನಡೆಸುತ್ತಲೂ ಬಂದಿದ್ದಾರೆ. ಆದರೆ ವಹ್ಹಾಬಿಸಂ ಎಂಬ ಸೌದಿಯ ಅಟ್ಟಹಾಸೀ ಸಿದ್ದಾಂತವನ್ನು ತಮ್ಮ ರಾಜಕೀಯದ ಎಂಜಲಿಗಾಗಿ ಇಲ್ಲಿನ ಕೆಲವು ಸಮುದಾಯ ಭಕ್ಷಕರು ಪೋಷಿಸಿದ್ದೇ ಇಂದು ಸಮುದಾಯಕ್ಕೆರಗಿದ ಸರ್ವ ಶಾಪಕ್ಕೂ ಕಾರಣ. ಇನ್ಶಾ ಅಲ್ಲಾ ಇವರನ್ನು ಹೆಡೆಮುರಿ ಕಟ್ಟಲು ಇಲ್ಲಿನ ಪ್ರಜ್ಞಾವಂತರು ಸದಾ ಸಿದ್ದಾರಾಗಿದ್ದಾರಲ್ಲದೆ ಇವರ ನಿಜ ಮುಖವನ್ನು ಬಯಲು ಮಾಡಿಯೇ ತೀರುವೆವು..

  ✍   *-ಅಹ್ಮದ್ ಜಾನ್*