Saturday, 12 August 2017

ಕೊಲೆ, ಹಲ್ಲೆ, ಡೋಂಗಿ, ವಂಚನೆ ಎಲ್ಲಿ ನಡೆದರೂ ಪೋಲಿಸರು ತಕ್ಷಣ ಬಂದು ಅರೆಷ್ಟ್ ಮಾಡುವುದು ಪೀಪಿಗಳನ್ನು. ಅಂದರೆ, ಡಿಪಾರ್ಟ್ಮೆಂಟ್ ನವರ ಮನದಲ್ಲಿ ಇಂತಹ ಸಮಾಜ ಘಾತುಕ ಕೆಲಸಗಳನ್ನು ಮಾಡುವವರು ಪೀಪಿಗಳು ಎಂಬ ಭಾವನೆ ಗಟ್ಟಿಯಾಗಿದೆ

ಮೊನ್ನೆ ಬೋಲಿಯಾರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಸ್ಲಿಯಾರ್ ಗಳೆಲ್ಲರೂ SSF ನವರು ಅಂತ ಪೀಪಿಗಳು ಸರ್ಟಿಫಿಕೇಟ್ ಕೊಟ್ಟಿದ್ದರು. ಅವರು ಆ ರೀತಿ ಹೇಳಲು ಕಾರಣವೂ ಇದೆ. ಅದೇನೆಂದರೆ, ಸಾಮಾನ್ಯವಾಗಿ ಟೊಪ್ಪಿ ಧರಿಸಿದವರು, ತಲೆ ಕಟ್ಟು ಕಟ್ಟಿದವರು SSF ನವರು ಎಂಬುದು ಸಾಮಾನ್ಯ ನಂಬಿಕೆಯಾಗಿ ಬಿಟ್ಟಿದೆ. ತಲೆ ಮರೆಯುವುದು ಪ್ರವಾದಿ (ಸ.ಅ) ರ ಸುನ್ನತ್ ಆಗಿದೆ. ಸುನ್ನತ್ ಮಾಡುವ ರೀತಿಯಲ್ಲಿ ಕಂಡದೆ ಅವರನ್ನು SSF ನವರು ಎಂದು ಈ ಪೀಪಿಗಳ ಸಹಿತ ಸಮಾಜ ಗುರುತಿಸುವುದರಲ್ಲಿ ನಮಗೆ ಅಭಿಮಾನವೂ ಇದೆ.*

*ವಾಸ್ತವದಲ್ಲಿ ತಲೆ ಮರೆಯುವವರೆಲ್ಲಾ SSF ನವರಲ್ಲ ಎಂಬುದು ಸತ್ಯ ಸಂಗತಿಯೇ. SSF ಅಲ್ಲದವರೂ ಟೋಪಿ, ತಲೆ ಕಟ್ಟು ಕಟ್ಟುತ್ತಾರೆ. ಆದರೆ, ಅದು ಹೆಚ್ಚಾಗಿ ಧರಿಸುವುದು SSF ನವರು ಎಂಬ ಭಾವಣೆ ಜನರ ಮನಸ್ಸಲ್ಲಿ ಅಡಕವಾಗಿದೆ.*

*ಅದರಂತೆ ಇನ್ನೊಂದು ರೂಪದಲ್ಲಿ ಇನ್ನೊಂದು ಸಂಘಟನೆಯರನ್ನು ಸಮಾಜ ಗುರುತಿಸುತ್ತದೆ. ಅದೇನೆಂದರೆ, ಕೊಲೆ, ಹಲ್ಲೆ, ದರೋಡೆ, ವಂಚನೆ, ಉಲಮಾ ತಂಙಳ್ ನಿಂದನೆ ಇತ್ಯಾದಿ ವಿಷಯದಲ್ಲಿ. ಯಾವುದೇ ಗ್ರೂಪ್ ತೆಗೆದು ನೋಡಿ. ಅದರಲ್ಲಿ ಯಾರಾದರೂ ಉಲಮಾಗಳನ್ನು, ತಂಙಳ್ ಗಳನ್ನು ವಿಪರೀತ ನಿಂದಿಸುತ್ತಿದ್ದರೆ, ಅದು ಪೀಪಿಗಳ ಕೆಲಸ ಎಂದು ಸಮುದಾಯ ಒಕ್ಕೊರಲಿನಿಂದ ಹೇಳುತ್ತದೆ. ಅಂದರೆ, ಪೀಪಿಗಳನ್ನು, ಇಸ್ಲಾಂ ಕಟುವಾಗಿ ವಿರೋಧಿಸಿದ ಉಲಮಾ, ತಂಙಳ್ ನಿಂದಕರಾಗಿ ಸಮಾಜ ಗುರುತಿಸುತ್ತದೆ. ಅದರಲ್ಲಿ ಅವರಿಗೆ ಹೆಮ್ಮೆ ಇರಬಹುದೇನೋ.*

*ಅದರಂತೆ, ಕೊಲೆ, ಹಲ್ಲೆ, ಡೋಂಗಿ, ವಂಚನೆ ಎಲ್ಲಿ ನಡೆದರೂ ಪೋಲಿಸರು ತಕ್ಷಣ ಬಂದು ಅರೆಷ್ಟ್ ಮಾಡುವುದು ಪೀಪಿಗಳನ್ನು. ಅಂದರೆ, ಡಿಪಾರ್ಟ್ಮೆಂಟ್ ನವರ ಮನದಲ್ಲಿ ಇಂತಹ ಸಮಾಜ ಘಾತುಕ ಕೆಲಸಗಳನ್ನು ಮಾಡುವವರು ಪೀಪಿಗಳು ಎಂಬ ಭಾವನೆ ಗಟ್ಟಿಯಾಗಿದೆ.*

*ಯಾರು ಯಾವ ವಿಷಯದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿದಿಕೊಳ್ಳುತ್ತಾರೋ, ಅದದು ಕಾರ್ಯದ ಮೇಲೆ ಅವರವರನ್ನು ಸಮಾಜ ಗುರುತಿಸುವುದು ಸ್ವಾಭಾವಿಕ. ಉದಾ: SSF ನವರಲ್ಲಿ ಹೆಚ್ಚಿನವರು ತಲೆ ಮರೆಸಿದಂತೆ.*
*ಪೀಪಿಗಳಲ್ಲಿ ಹೆಚ್ಚಿನವರು ಅನ್ಯಾಯ, ವಂಚನೆ, ಉಲಮಾ ನಿಂದನೆ ಯಲ್ಲಿ ತೊಡಗಿಸಿಕೊಂಡಂತೆ.*

*ಮಾಜಿ ಪೀಪಿ.*

No comments:

Post a Comment