ತಂದೆಯನ್ನು ತೋರಿಸಿ ಇವರು ನನ್ನ ಮಗ ಅಂತ ಮಗ ಹೇಳಿದರೆ, ಅವನಿಗೆ ಹುಚ್ಚು ಎಂದು ಜನ ಭಾವಿಸುತ್ತಾರೆಯೇ ವಿನಹಃ, ವಿಷಯ ಸತ್ಯ ಅಂತ ತಲೆಯಲ್ಲಿ ಬುದ್ಧಿಯಿರುವ ಯಾವ ಮನುಷ್ಯರೂ ನಂಬಲ್ಲ.
ಹಂಗಾಯಿತು ಈ ಪೀಪಿಗಳ ಅವಸ್ಥೆ. ತಾವು ಹುಟ್ಟುವುದಕ್ಕಿಂತ ಮುಂಚೆಯೇ ಸಮುದಾಯದ ಮಧ್ಯೆ ಚಾಲ್ತಿಯಲ್ಲಿದ್ದ ಆಚರಣೆಗಳನ್ನೆಲ್ಲಾ ತಾವು ಕಾಪಿಮಾಡಿ, ಇವಾಗ ಇವರನ್ನು ನೋಡಿ ಸಮುದಾಯ ಅನುಸರಿಸುತ್ತಿದೆ ಎಂದರೆ, ಇವರಿಗಿಂತಲೂ ಮೂರ್ಖ ಶಿಖಾಮಣಿ ಗಳು ಈ ಪ್ರಪಂಚದಲ್ಲಿ ಇನ್ಯಾರು ಅಲ್ಲವೇ.
ಸಮುದಾಯ ಸ್ವಾತಂತ್ರ್ಯ ದಿನವನ್ನು ಆಚರಿಸಲು ಪೀಪಿಯನ್ನು ನೋಡಿ ಕಲಿತದ್ದಂತೆ. ಕೇವಲ ಸರಕಾರಿ ಕಛೇರಿಯಲ್ಲಿ ಮಾತ್ರ ಆಚರಿಸುತ್ತಿದ್ದ ಆಗಷ್ಟ್ 15, ಇಂದು ಜನರ ಮಧ್ಯೆ ತಂದವರು ಕೂಡಾ ಪೀಪಿಗಳಂತೆ..😝🤣
*ಈ ಪೀಪಿ ಹುಟ್ಟುವುದಕ್ಕಿಂತಲೂ ಮುಂಚೆ, ನಾವು ಚಿಕ್ಕಂದಿನಲ್ಲಿ ಮದರಸ ಹೋಗುತ್ತಿರುವಾಗಲೇ ನಮ್ಮೆಲ್ಲಾ ಮಸೀದಿ, ಮದರಸಗಳಲ್ಲಿ ನಮ್ಮ ಉಲಮಾಗಳ ನೇತೃತ್ವದಲ್ಲಿ, ಅವರ ನಿರ್ದೇಶನಾನುಸಾರ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದದ್ದು ನಮಗೆ ಇವಾಗಲೂ ನೆನಪಿದೆ. ಅದು ಈ ಪೀಪಿಗಳಿಗೆ ಗೊತ್ತಿಲ್ಲವೇನೋ, ಅಲ್ಲ, ಸರಕಾರೇತರ ಕಛೇರಿ ಗಳೆಲ್ಲಾ ಪೀಪಿಯ ಪಿತ್ರಾರ್ಜಿತ ಸೊತ್ತು ಎಂದು ಇವರು ಭಾವಿಸಿದದ್ದಾರೋ ಏನೋ.*
ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಉಸ್ತಾದ್ ರೊಂದಿಗೆ ಇಂಜಿನಿಯರ್, ಡಾಕ್ಟರ್ ಗಳನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿ, ಮೇಲು ಕೀಳು ಎಂಬ ಗೋಡೆಯನ್ನು ಉರುಳಿಸಿ ಹಾಕಿದವರು ಪೀಪಿಗಳಂತೆ.!
*ಇದಕ್ಕಿಂತ ಹಾಸ್ಯಾಸ್ಪದ ವಾದ ಜೋಕನ್ನು ಈ ಮುಂಚೆ ನೀವೆಲ್ಲೂ ಕೇಳಿರಳಿಕ್ಕಿಲ್ಲ. 1400 ವರ್ಷಗಳ ಮುಂಚೆ ಸರ್ವ ಮಾನವ ಕುಲಕ್ಕೆ ಶಾಂತಿಯ ದೂತರಾಗಿ ಬಂದ ಪ್ರವಾದಿ ಮುಹಮ್ಮದ್ (ಸ.ಅ) ರು, ಸಮಾಜದಲ್ಲಿ ಬೇರೂರಿದ್ದ ಕರಿಯ-ಬಿಳಿಯ, ಶ್ರೀಮಂತ-ಬಡವ, ಎಂಬ ಮೇಲು-ಕೀಲು ಭಾವನೆಯನ್ನು ತೊಲಗಿಸಿ, ಎಲ್ಲರನ್ನೂ ಒಂದೇ ಸಮನೆ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾದವರಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಅದು ಮುಸ್ಲಿಂ ಸಮುದಾಯದಲ್ಲಿ ಪಾಲನೆಯಾಗುತ್ತಾ ಬರುತ್ತಿದೆ. ಅದಕ್ಕೆ ಒಂದು ಉತ್ತಮ ಉದಾಹರಣೆ ನಮಾಝ್ ಆಗಿದೆ. ಇದ್ಯಾವುದರ ಬಗ್ಗೆಯೂ ಗೊತ್ತಿರದ ಈ ಪೀಪಿಗಳು ಹೇಳುತ್ತಾರೆ, ಮೇಲು ಕೀಳು ಎಂಬ ಭೇದಭಾವವನ್ನು ಸಮುದಾಯದಿಂದ ಕಿತ್ತೆಸೆದವರು ಇವರಂತೆ.*
*ಮತ್ತೆ ಇವರ ಪೆರೇಡ್ ವಿಷಯ, 1400 ವರ್ಷಗಳಿಂದ ಮುಸ್ಲಿಂ ಸಮುದಾಯ ಒಕ್ಕೊರಲಿನಿಂದ ವಿರೋಧಿಸುತ್ತಾ ಬಂದಂತಹ, ಇದುವರೆಗೂ ಚಾಲ್ತಿಯಲ್ಲಿರದ ಮ್ಯೂಸಿಕ್ ಸಿಸ್ಟಮಿನ ಪೆರೇಡ್ ಸಮುದಾಯದ ಮಧ್ಯೆ ಪ್ರಪ್ರಥಮವಾಗಿ ಚಾಲ್ತಿಗೆ ತಂದ ಅಬುಜಾಹಿಲ್ ನ ಕೂಟರಾಗಿದ್ದಾರೆ ಈ ಪೀಪಿಗಳು.*
*ಅಂದೊಮ್ಮೆ ಇವರು ಒಂದು ಪೋಷ್ಟರ್ ಪ್ರಕಟಿಸಿದ್ದರು. ಅದೇನೆಂದರೆ, "ಇಸ್ರೇಲ್ ಕುಸಿಯಲಿದೆ, ಫೆಲಸ್ಥೀನ್ ಎದ್ದೇಳಲಿದೆ" ಎಂದು. ಅದಾಗಿ ವರ್ಷಗಳು ಕಳೆದು ಇಸ್ರೇಲ್ ನಲ್ಲಿ ದೊಡ್ಡ ಅಗ್ನಿ ಅನಾಹುತವಾಯಿತು. ಇದನ್ನು ಪ್ರಸ್ತಾಪಿಸಿದ ಈ ಪೀಪಿಗಳು ಅಂದು ಹೇಳಿದರು, ನಾವು ವರ್ಷಗಳ ಮುಂಚೆ ನುಡಿದ ಭವಿಷ್ಯ ಇಂದು ನಿಜವಾಗಿದೆಯೆಂದು.*
*ಇಸ್ರೇಲ್ ಕುಸಿಯುವುದೂ, ಮುಸ್ಲಿಂ ಸಮುದಾಯ ಎದ್ದೇಳುವುದೂ, 1400 ವರ್ಷಗಳ ಮುಂಚೆ ಪ್ರವಾದಿ (ಸ.ಅ) ರು ನುಡಿದ ಭವಿಷ್ಯವಾಣಿ ಗಳಾಗಿವೆ. ಅದನ್ನೇ ಈ ಪೀಪಿಗಳು ಪೋಷ್ಟರ್ ಮಾಡಿ ಪ್ರಕಟಿಸಿದ್ದು ಎಂದು ಇವರಿಗೆ ಗೊತ್ತಿಲ್ಲವೇನೋ*
*ಹಾಗಾದರೆ, ಇವರಿಗೆ ಇನ್ನೂ ಹಲವಾರು ಭವಿಷ್ಯಗಳನ್ನು ನುಡಿಯಬಹುದು. 1400 ವರ್ಷಗಳ ಮುಂಚೆ ಪ್ರವಾದಿ (ಸ.ಅ) ರು ನುಡಿದ ಹಲವಾರು ಭವಿಷ್ಯವಾಣಿ ಗಳು ಗ್ರಂಥಗಳಲ್ಲಿ ಇದೆ. ಅದನ್ನೆಲ್ಲಾ ಇವಾಗಲೇ ಪ್ರಕಟಿಸಿ, ಅದು ನಿಜವಾದಾಗ ನಾವು ವರ್ಷಗಳ ಮುಂಚೆ ನುಡಿದ ಭವಿಷ್ಯವಾಣಿ ನಿಜವಾಗಿದೆ ಅಂತ ಜಂಭ ಕೊಚ್ಚಿಕೊಳ್ಳಬಹುದಲ್ವ.* 🤣🤣.
*ಸಮುದಾಯದ ಸಂಘಟನೆಗಳು ಪ್ರತಿಭಟನೆ ಮಾಡುವುದನ್ನು ಪ್ರಸ್ತಾಪಿಸಿ, "ಸಮುದಾಯಕ್ಕೆ ಪ್ರತಿಭಟನೆ ಮಾಡುವುದನ್ನು ತೋರಿಸಿ ಕೊಟ್ಟವರು ನಾವು" ಎಂದು ಜಂಭದಿಂದ ಈ ಪೀಪಿಗಳು ಮೆಸೇಜ್ ಮಾಡುತ್ತಾರೆ. ಈ ಪೀಪಿ ಇಲ್ಲಿ ಹುಟ್ಟುವುದಕ್ಕಿಂತಲೂ ಹಲವಾರು ವರ್ಷಗಳ ಮುಂಚೆ ಶಾಬಾನು ಪ್ರಕರಣ, ಬಾಬರೀ ಮಸ್ಜಿದ್ ಮುಂತಾದ ವಿಷಯದಲ್ಲಿ ನಮ್ಮ ನೇತಾರರು ಅಂದು ಪ್ರತಿಭಟನೆ ಮಾಡಿದ ಬಗ್ಗೆ ಇಂದು ಕೂಡಾ ನಮ್ಮಲ್ಲಿ ದಾಖಲೆಗಳಿವೆ. ಅಂದು ಅವರು ಮಾಡಿದ ಪ್ರತಿಭಟನೆಯ ಫಲ ಸುಪ್ರೀಮ್ ಕೋರ್ಟ್ ಕೂಡಾ ತನ್ನ ತೀರ್ಪನ್ನು ಹಿಂತೆಗೆದ ಚರಿತ್ರೆ ಇದೆ. ಇಂದಿನ ಪೀಪಿಗಳ ನಾಯಿ ಮೂಸದ 1000 ಪ್ರತಿಭಟನೆಯಲ್ಲಿ ಒಂದಕ್ಕೂ ಮಾನ್ಯತೆ ಇಲ್ಲದ್ದು ವಿಪರ್ಯಾಸ. ಅಂತಹ ಪ್ರತಿಭಟನೆ ಮಾಡಿದರೆಷ್ಟು ಬಿಟ್ಟರೆಷ್ಟು ಅಲ್ಲವೇ. ಅಂತಹವರಿಂದ ಯಾವುದೇ ಉಪದೇಶ ಸಮುದಾಯಕ್ಕೆ ಅಗತ್ಯವಿಲ್ಲ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.*
*ಸತ್ಯನುಡಿ*
No comments:
Post a Comment