ಮೊನ್ನೆ ತನಕ ನಾಯಕ, ನೇತಾರ, ತೌಹೀದೀ ಪ್ರಚಾರಕ, ಮಣ್ಣಾಂಗಟ್ಟಿ ಅಂತ ತಲೆಯಲ್ಲಿಟ್ಟು ನಡೆಯುತ್ತಿದ್ದ ಸಲಫಿಗಳು ಈಗ ಅದೇ ನಾಯಕನನ್ನು ದಡ್ಡ, ಬೇಕೂಫ ಅಂತೆಲ್ಲಾ ಕರೆಯತೊಡಗಿದ್ದಾರೆ. ಸಲಫಿಗಳ ನಿಜಮುಖವನ್ನು ಅನಾವರಣ ಮಾಡಿದರೆ ಕೆರಳುತ್ತಿದ್ದ ಕೆಲವು ಪೆದಂಬರು ಈಗ ತಮ್ಮ ಮುಖಂಡನಿಂದಲೇ ತಮ್ಮ ಮುಖವಾಡ ಬಯಲಾದಾಗ ಕೆಲವರು, ಆತನ ಮಾತನಲ್ಲೇನಿದೆ ಮಹಾ ಅಂತ ಸಮಾಧಾನ ಪಟ್ಟರೆ ಇನ್ನು ಕೆಲವರು ಛೆ ಈತ ನಮ್ಮ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿ ಬಿಟ್ಟನಲ್ಲ ಅಂಥ ಪೆದ್ದ, ಬುದ್ದಿಯಿಲ್ಲದವ ಅಂತೆಲ್ಲಾ ಗೊಣಗುತ್ತಿದ್ದಾರೆ. ಮರ್ಮಕ್ಕೆ ಬಿದ್ದ ಪೆಟ್ಟಿನ ಆಘಾತವನ್ನು ಒಳಗೊಳಗೆ ಬಸಿದಿಟ್ಟರೂ ಅದು ಆಕ್ರೋಶವಾಗಿ ಮೂಡಿ ಬರುತ್ತಿದೆ.
ಇಡೀ ಕರ್ನಾಟಕದ ಸಲಫೀಗಳಿಗೇ ಮಾದರಿಯಾಗಿದ್ದ ಮುಖಂಡ ಈಗ ಇವರಿಗೆ ಕೇವಲ ಪೆದ್ದ ಸಲಫಿಯಂತೆ. ಆದರೆ ನಮ್ಮ ಉಲಮಾಗಳು ಅಂದೇ ಇವರ ಪೆದ್ದುತನವನ್ನು ಬಯಲು ಮಾಡಿದ್ದರು. ಈ ಕಾರಣಕ್ಕಾಗಿಯೇ ಅಂದು ಉಲಮಾಗಳ ಹಸಿಮಾಂಸ ಭಕ್ಷಣೆ ಮಾಡಿದವರಿಗೆ ಇಗ ಜ್ಞಾನೋದಯವಾಗಿದೆ ಅಂತನಿಸುತ್ತದೆ.
ಏನೇ ಆದರೂ ಸ್ವಲ್ಪಮಟ್ಟಿಗೆ ಪೆಟ್ಟು ಬಿದ್ದಾಗ ತಮ್ಮ ಸಲಫಿ ನಾಯಕನೇ ಇವರಿಗೆ ಅಪಥ್ಯವಾದರು. ಪ್ರವಾದಿಯರನ್ನು, ಮುಹಿಯುದ್ದೀನ್ ಶೈಖರೊಂದಿಗೆ ಆಟವಾಡಿದರೆ ತಿಕ್ತ ಫಲವನ್ನು ಯಾರೇ ಆದರೂ ಅನುಭವಿಸಲೇಬೇಕು. ತಪ್ಪು ಮಾಡಿದ್ದಕ್ಕೆ ಚೆನ್ನಾಗಿಯೇ ಪೆಟ್ಟು ಬೀಳಲಿ. ಅದರಲ್ಲಿ ಮುಸ್ಲಿಮರಿಗೆ ಯಾವುದೇ ಅನುಕಂಪವೋ, ಸಹಾನುಭೂತಿಯೂ ಇಲ್ಲ..
*-ಆದಿಲ್ ಜಾನ್*
No comments:
Post a Comment