ಕೆಲವು ದಿನಗಳಿಂದ ವಾಟ್ಸಾಪ್ ನಲ್ಲಿ ಮಸೀದಿಯೊಂದರ ಜಮಾತ್ ಕಮಿಟಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡದ್ದು ಬಾರೀ ಟೀಕೆಗೆ ಗುರಿಯಾಗಿದೆ.
ಜಾಹಿಲಿಯ್ಯಾ ಕಾಲದಲ್ಲಿ ಮಕ್ಕಾ ಖುರೈಶಿಗಳು ಇಂತಹ ಅಪ್ರಭುಧ್ಧತೆಯ ನಿರ್ಣಯಗಳನ್ನು ಬರೆದು ಪವಿತ್ರ ಕಅಬಾದಲ್ಲಿ ತೂಗುಹಾಕುತ್ತಿದ್ದರು.
ಶಿಅಬ್ ಅಬೀ ತಾಲಿಬ್ ಕಣಿವೆಯಲ್ಲಿ ಪುಣ್ಯರಸೂಲರನ್ನು ಮತ್ತು ಸಂಗಡಿಗರನ್ನು ಬಹಿಷ್ಕರಿಸುವ ಠರಾವು ಮಕ್ಕಾ ಖುರೈಶಿಗಳು ಬರೆದು ಕಅಬಾದಲ್ಲಿ ತೂಗು ಹಾಕಿದ್ದರು.ಕೊನೆಗೆ ಅವರೇ ಅದನ್ನು ಕಿತ್ತುಹಾಕಿದರು!
ಅಲ್ಲಾಹು ಅವರಿಂದಲೇ ಅದನ್ನು ತೆಗೆಸಿದ!
ಜಮಾತ್ ಕಮಿಟಿಯೆಂದರೆ ಅದೇನು ಸುಪ್ರೀಂ ಅಲ್ಲ.ಅಲ್ಲಾಹನ ಭವನದಲ್ಲಿ ಅಧಿಕಾರ ನಡೆಸುವ ಅಧಿಕಾರ ಯಾವುದೇ ಜಮಾತ್ ಕಮಿಟಿಗೆ ಇಲ್ಲ.
ಮಸೀದಿ ಎಂಬ ಭವನ ಅಲ್ಲಾಹನದ್ದು.ಅಲ್ಲಿ ಅಧಿಕಾರ ಚಲಾಯಿಸುವುದೆಂದರೆ ಅಲ್ಲಾಹನ ಮೇಲೆ ಅಧಿಕಾರ ಚಲಾಯಿಸಿದಂತೆ.
ಆದ್ದರಿಂದಲೇ ಯಾವುದೇ ಕಮಿಟಿಗೆ ಮಸೀದಿಯ ಅಧಿಕಾರ ಎಂಬುವುದು ಇಲ್ಲವೇ ಇಲ್ಲ. ಏನಿದ್ದರೂ ಅವರು ಮಸೀದಿಯ ಸೇವೆಗೆ ಅರ್ಹರು.
ಮಸೀದಿಯಲ್ಲಿ ಒಂದು ವಕ್ತ್ ಜಮಾತ್ ನಡೆದಿಲ್ಲವೆಂದರೆ ಮೊತ್ತಮೊದಲಿಗರಾಗಿ ಮಸೀದಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ತಪ್ಪುಗಾರರಾಗುತ್ತಾರೆ.
ಆ ನಿಟ್ಟಿನಲ್ಲಿ ತಮ್ಮ ಪರಲೋಕ ಸಂರಕ್ಷಣೆಗೆ ಪೂರಕವಾಗುವ ನಿರ್ಣಯಗಳನ್ನು ಹೊರತರುವುದನ್ನು ಬಿಟ್ಟು ಮನಷ್ಯ ಮನಸ್ಸುಗಳ ಮದ್ಯೆ ಬಿರುಕು ಸ್ರೃಷ್ಟಿಸುವ ಕುರಡು ಕರಡುಗಳನ್ನು ಹೊರತರಬಾರದು.
ಪಳ್ಳಿ ಜಮಾತ್ ಕಮಿಟಿಯೆಂದರೆ ತಿಂಗಳಾಗುವಾಗ ಉಸ್ತಾದರ ಸಂಬಳ ಕೊಟ್ಟು ತೀರಿಸುವುದು,ವಂತಿಗೆ ಕಲಕ್ಷನ್ ಮಾಡುವುದು,ವರ್ಷದಲ್ಲಿ ಬರುವ ರಾತೀಬು,ಈದ್ ಮೀಲಾದ್ ಆಚರಿಸುವುದಕ್ಕೆ ಮಾತ್ರ ಸೀಮಿತವೆಂದು ಬಗೆದವರಿದ್ದಾರೆ.
ನಿಜವಾಗಿಯೂ ಜಮಾತ್ ಕಮಿಟಿ ಆಯಾ ಮಹಲ್ಲಿನ ಪ್ರತಿಯೊಂದು ಮನೆಗಳಲ್ಲಿ ಶಾಂತಿ ಸಮಾಧಾನ, ಸಹಬಾಳ್ವೆ ಬದುಕಿನ ಸೇತುವೆಯಾಗ ಬೇಕೆ ಹೊರತು ಅಮೇರಿಕಾದ ಟ್ರಂಪ್ ನಂತೆ ಸರ್ವಾಧಿಕಾರಿಯಾಗಿ ಊರಿಗೆ ಮಾರಿಯಾಗಬಾರದು.
ನಿಕಾಹ್ ಎಂಬುದು ಸುನ್ನತ್ತಾದ ಕಾರ್ಯ.
ವರ ಮತ್ತು ವಧುವಿನ ತಂದೆ ಎರಡು ಶಾಕ್ಷಿಗಳ ಮುಂದೆ ಸ್ವತಃ ಪರಸ್ಪರ ಈಜಾಬ್/ ಖಬೂಲ್ ಮಾಡಿದರೆ ನಿಕಾಹ್ ಸಿಂಧುವಾಗುತ್ತದೆ.ಅದಕ್ಕೆ ಪಳ್ಳಿ ಖತೀಬೇ ಹೇಳಿ ಕೊಡಬೇಕೆಂದು ಕಡ್ಡಾಯ ನಿಯಮ ಇಸ್ಲಾಮಿನಲ್ಲಿ ಇಲ್ಲ.
ಹಾಗಿರುವಾಗಲೇ ಇಂತಹ ಅಪ್ರಭುಧ್ಧತೆಯ ತೀರ್ಮಾನವನ್ನು ಜಮಾತ್ ಕಮಿಟಿ ಕಡ್ಡಾಯ ಮಾಡುವುದು ಜಾಹಿಲಿಯ್ಯಾ ಮಕ್ಕಾ ಖುರೈಶಿಗಳ ತೀರ್ಮಾನದಂತೆ ಸರ್ವಾಧಿಕಾರಿಯುತವೇ ಹೊರತು ನ್ಯಾಯಯುತವಲ್ಲ.
ಅದೇ ಸಮಯ ಬರಕತ್ ಉದ್ದೇಶಿಸಿ ಮತ್ತು ವಚನಗಳ ಸ್ಪಷ್ಟತೆ ಬಗ್ಗೆ ನಿಗಾ ವಹಿಸಿ ಉಲಮಾಗಳ ಹಾಗೂ ಸಾದತುಗಳ ಮೂಲಕ ನಿಕಾಹ್ ನೆರವೇರಿಸುವುದು ವಾಡಿಕೆ.
ಆದರೆ ಅದನ್ನೀಗ ರಾಜಕೀಯ ಚದುರಂಗಾಟಕ್ಕೆ ಮೀಸಲಿಟ್ಟಂತೆ ಕೆಲವರು ವರ್ತಿಸುತ್ತಿರುವುದು ಖಂಡನೀಯ.
ಅದರಲ್ಲೂ ಗ್ರೂಫಿಸಂ ತಲೆಗೆ ಅಡರಿದ ಕೆಲವರು ಸಂತೋಷದ ಸಂಭ್ರಮದ ಮದುವೆ ಮಂಟಪವನ್ನು ಸೂತಕದ ಸೂರನ್ನಾಗಿ ಮಾರ್ಪಡಿಸುತ್ತಿದ್ದಾರೆ.
ವಾಟ್ಸಪ್ ಮುಖಾಂತರ ರವಾನೆಯಾಗುತ್ತಿರುವ ಮಸೀದಿಯೊಂದರ ನಿರ್ಣಯದಲ್ಲಿ ವರನ ನಿಕಾಹನ್ನು ಆ ಪಳ್ಳಿಯ ಖತೀಬ್ ಅಥವಾ ಮಿತ್ತಬೈಲ್ ಉಸ್ತಾದ್,ಮಂಗಳೂರು ಖಾಝಿ ತಾಖ ಉಸ್ತಾದ್ ಮಾತ್ರ ನಿರ್ವಹಿಸ ಬೇಕಂತೆ.ಹಾಗಾದರೆ ದುಗ್ಗಲಡ್ಕ ಝೈನುಲ್ ಆಬಿದೀನ್ ತಂಙಳ್,ಕುಂಬೋಳ್ ಅಲಿ ತಂಙಳ್,ಅತ್ರಾಡಿ ಖಾಝಿ,ಬಂಬ್ರಾಣ ಉಸ್ತಾದ್, ಸಮಸ್ತದ ಪರಮೋಚ್ಚ ನಾಯಕ ಸೆಯ್ಯದ್ ಜಿಫ್ರಿ ತಂಙಳ್,ಶೈಖುನಾ ಅಲಿ ಕುಟ್ಟಿ ಉಸ್ತಾದ್ ಮುಂತಾದವರು ಇದ್ದರೆ ಊರಿನ ಖತೀಬರೇ ನಿಕಾಹ್ ನೇರವೇರಿಸ ಬೇಕಾ ಅದಲ್ಲ ಈ ಕುರುಡು ನಿರ್ಣಯಗಳನ್ನು ಉಲ್ಲಂಘನೆ ಮಾಡುವುದಾ?
ಕಾರಣ ಅದರಲ್ಲಿ *ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಮತ್ತು ಮಿತ್ತಬೈಲ್ ಉಸ್ತಾದ್ ರವರು*
ಎಂದು ಬರೆಯಲಾಗಿದೆ.
*ಮುಂತಾದ ಸಮಸ್ತ ಉಲಮಾಗಳು*
ಎಂಬ ಪದವನ್ನು ಉಪಯೋಗಿಸಲಿಲ್ಲ.
ಒಂದಂತು ನಾವು ತಿಳಿದಿರಲೇ ಬೇಕು ಗ್ರೂಫಿಸಂ ನೋಡಿ ಉಲಮಾ ಸಾದಾತುಗಳನ್ನು ಗೌರವಿಸುವುದು ಇಸ್ಲಾಂ ಕಲಿಸಲೇ ಇಲ್ಲ.
ಎಪಿ ವಿಭಾಗದ ಒಬ್ಬ ಖತೀಬ್ ಇದ್ದಲ್ಲಿ ಅಲ್ಲಿಗೆ ಇ ಕೆ ಸಮಸ್ತದ ಸೆಯ್ಯದ್ ಗಳಾದ ಜಿಫ್ರೀ ತಂಙಳ್,ದುಗಲಡ್ಕ ತಂಙಳ್,ಮಿತ್ತಬೈಲ್ ಉಸ್ತಾದ್ ಆಗಮಿಸಿದರೆ ನಿಕಾಹ್ ಕಾರ್ಯವನ್ನು ಅವರಿಗೆ ವಹಿಸಿಕೊಡುವುದು ಅದಬ್!
ಅಂತಹ ಸಂಧರ್ಭಗಳಲ್ಲಿ ಜಮಾತ್ ಕಮಿಟಿ ಆಯಾ ಖತೀಬರಿಗೆ ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಬೇಕು.
ಅದರಂತೆ ಈ ಕೆ ವಿಭಾಗದ ಖತೀಬ್ ಇದ್ದಲ್ಲಿ ಎಪಿ ಸಮಸ್ತದ ಯಾರಾದರೂ ದೊಡ್ಡ ಆಲಿಂ ಸೆಯ್ಯದ್ ಆಗಮಿಸಿದರೆ ಅವರಿಗೆ ಬಿಟ್ಟು ಕೊಡುವುದು ಅದಬ್!
*ಇಸ್ಲಾಮಿನ ಕೆಲವೊಂದು ಕಾನೂನುಗಳಿಗಿಂತ ಮಿಗಿಲಾಗಿ ಅದಬ್ ಪಾಲಿಸುವುದಕ್ಕೆ ಮೊದಲನೇ ಸ್ಥಾನ ಎಂಬ ತತ್ವ ಇಸ್ಲಾಮಿನಲ್ಲಿ ಇದೆ ಎಂಬುದನ್ನು ಎಲ್ಲಾ ಜಮಾತ್ ಕಮಿಟಿಗಳು ಅರಿತಿರಬೇಕು.*
ಊರಿನಲ್ಲಿ ಅದೆಷ್ಟೋ ಹೆಣ್ಣು ಹೆತ್ತವರು ವರದಕ್ಷಿಣೆ ಪಿಡುಗಿನಿಂದಾಗಿ ಕಣ್ಣೀರು ಸುರಿಸುತ್ತಿರುವಾಗ ಅದರ ಬಗ್ಗೆ ನಿರ್ಣಯ ತೆಗೆದಿದ್ದರೆ ಅದೊಂದು ಮಾದರಿ ನಿರ್ಣಯವಾಗುತ್ತಿತ್ತು.
ಅದೆಷ್ಟೋ ಮುಸ್ಲಿಂ ಹುಡುಗರು ಗಾಂಜಾ ಅಫೀಮುಗಳ ದಾಸರಾಗಿ ದೀನಿಲ್ಲದೆ ಅಂಡಲೆಯುವಾಗ ಅದರ ವಿರುದ್ಧ ಠರಾವು ಪಾಸ್ ಮಾಡಿದ್ದರೆ ಜನರು ನಿಮ್ಮ ಜಮಾತ್ ಗೆ ಸೆಲ್ಯೂಟ್ ಹೊಡೆಯುತ್ತಿದ್ದರು.
ಅದೆಷ್ಟೋ ಯುವಕರು ನಿರುದ್ಯೋಗಿಗಳಾಗಿ ಬವಣೆ ಪಡುತ್ತಿರುವಾಗ ಅವರಿಗೊಂದು ಪರಿಹಾರ ಜಮಾತ್ ಕಮಿಟಿಯ ವತಿಯಿಂದ ತೋರಿಸಿದ್ದರೆ ನಿಮ್ಮ ಪರಲೋಕಕ್ಕೆ ಅದೇ ಸಾಕಗುತ್ತಿತ್ತು.
ಫ್ಯಾಶಿಷ್ಟ್ ಶಕ್ತಿಗಳು ನಮ್ಮ ನಾಶವನ್ನೇ ಗುರಿಯಾಗಿಟ್ಟು ಕಾರ್ಯಚರಿಸುತ್ತಿರುವಾಗ ನಾವು ಒಗ್ಗಟ್ಟಾಗಿ ಕಾರ್ಯಚರಿಸುವ ಬದಲು ಮತ್ತಷ್ಟು ಭಿನ್ನತೆ ಸ್ರೃಷ್ಟಿಸುವ ಇಂತಹ ಕುರುಡು ನಿಯಮಗಳನ್ನು ತಂದು ಸಮುದಾಯವನ್ನು ಇನ್ನಷ್ಟೂ ಅಪಾಯದ ಕೂಪಕ್ಕೆ ತಳ್ಳಬೇಡಿ.. ಪ್ಲೀಸ್...
_ಅಬೂಶಝ
No comments:
Post a Comment