*ಅಸ್ಸಲಾಮು ಅಲೈಕುಂ*
ಇಸ್ಮಾಯಿಲ್ ಶಾಫಿ ಮೌಲವಿಯ ಆಡಿಯೋ ವೈರಲ್ ಆಗಿದ್ದು ತಮ್ಮೊಳಗೆ ಭಿನ್ನಾಭಿಪ್ರಾಯಗಳು ಸ್ರಷ್ಟಿಯಾಗಿ ನಮ್ಮ ಉಲಮಾಗಳು ಅಮದಿನಿಮದ ಹೇಳಿ ಬಂದಂತಹ ಸತ್ಯಾಂಶಗಳು ಒಂದೊಂದಾಗಿ ಹೊರಬರತೊಡಗಿದೆ.
ಇದರ ಪರಿಣಾಮ ಮೌಲವಿಗಳು ತಮ್ಮ ಗುಟ್ಟುಗಳೆಲ್ಲ ಬಯಲಾಗಿ ತುಂಬಲಾರದ ನಷ್ಟ ಅನುಭವಿಸುತ್ತಿರುವುದು ಕಾಣಬಹುದು..
ಇಂತಹ ಸನ್ನಿವೇಶದಲ್ಲಿ ಆಗಿರುವಂತಹ ಅನಾಹುತಗಳನ್ನ ಒಂದು ತೌಹೀದಿನ ಭಾಗವಾಗಿ ಚಿತ್ರೀಕರಿಸಲು ಕೆಲವು ಮೌಲವಿಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಬಂದಿರುವುದು ನಿಜವಾಗಿಯೂ ಕೇದಕರ.
ಅಲ್ಲಾಹನ ಇಸ್ಲಾಮಿನ ಕುರಿತು ಕುರ್ ಆನ್ ಹದೀತ್ಸ್ ಇಜ್ಮಾಅ್ ಖಿಯಾಸ್ ಏನೆಂದರಿಯದೆ ,ಸಲಪಿಗಳು ಯಾರ್ಯಾರೋ ತಮಗೆ ಬೇಕಾದಂತೆ ಗೀಚಿರುವ ಪುಸ್ತಕದಿಂದಲೋ ಕಂಪ್ಯೂಟರ್ ನಿಂದಲೋ ಬಂದಂತಹ ಅನುವಾದಗಳನ್ನ ಕಲಿತು ಅದುವೇ ಇಸ್ಲಾಂ ಎಂದು ಭಾವಿಸಿ ಆ ವಾದಗಳಿಗೆ ಕೆಲವು ಮೌಲವಿಗಳು ತೌಹೀದ್ ಎಂಬ ನಾಮವನ್ನಿಟ್ಟು ಪ್ರಚಾರ ರಂಗದಲ್ಲಿ ತೊಡಗಿರುತ್ತಾರೆ.
ಇದರ ಪರಿಣಾಮ ಅಮಾಯಕ ಯುವಕರು ಮುಸ್ಲಿಮ್ ಬಾಂಧವರು ಇಂತಹ ಇಸ್ಲಾಮಿನ ವೈರಿಗಳ ತಂತ್ರಕ್ಕೆ ಬಲಿಯಾಗಿ ಇಸ್ಲಾಮಿನ ನೈಜತೆಯನ್ನ ಇಲ್ಲದಾಗಿಸಿ ತಪ್ಪು ದಾರಿಗೆ ಬಲಿಯಾಗುವುದು ಕಾಣಲು ಸಾಧ್ಯವಾಗುತ್ತಿದೆ.
ಆಲಿಮ್ ಗಳು ಇದರ ಕುರಿತು ಮುನ್ನೆಚ್ಚರಿಕೆ ನೀಡಿಯೂ ಅದನ್ನ ಧಿಕ್ಕರಿಸಿ ಮೌಲವಿಗಳು ನಿರಂತರ ತಮ್ಮ ಸುಳ್ಳು ವಾದಗಳನ್ನ ಸತ್ಯವೆಮಬಂತೆ ಬಿಂಬಿಸಿ ಮೇಲ್ನೊಟಕ್ಕೆ ಸಾಚಾರರಾಗಿ ತೋರಿಸಲು ಪ್ರಯತ್ನಗಳು ಈ ಮೌಲವಿಗಳು ನಡೆಸುತ್ತಿದ್ದಾರೆ.
*ಇನ್ನಾದರು ಎಚ್ಚೆತ್ತುಕೊಳ್ಳಿ ಯುವ ಜನಾಂಗವೇ ತಮ್ಮ ದೀನನ್ನು ಕೊಳ್ಳೆ ಹೊಡೆಯಲು ಬಂದಿರುವ ಈ ಇಸ್ಲಾಮಿನ ಶತ್ರುಗಳನ್ನು ದೂರವಿಟ್ಟು ಇಸ್ಲಾಮಿನ ತತ್ವಾದರ್ಶಗಳನ್ನ ಅನುಸರಿಸಿ ಅಲ್ಲಾಹನ ಹಬೀಬರ ಸಾನಿಧ್ಯದಿಂದ ಬಂದಂತಹ ಅಹ್ಲುಸ್ಸುನ್ನಃ ವಲ್ ಜಮಾಅತ್ನಲ್ಲಿ ಭದ್ರವಾಗಿ ನಿಂತು ಸ್ವಹಾಬತುಲ್ ಕಿರಾಮ್ ಗಳನ್ನ,ತಾಬಿಈನ್ ಗಳನ್ನ,ಅಇಮ್ಮತ್ ಗಳನ್ನ,ಇಮಾಮರುಗಳನ್ನ,ಉಲಮಾ ಶಿರೋಮಣಿಗಳನ್ನ ಬಹುಮಾನಿಸಿ ಅವರು ತೋರಿಸಿ ಕೊಟ್ಟ ಆಶಯ ಆದರ್ಶ ಗಳನ್ನ ಅನುಸರಿಸಿ ಇಸ್ಲಾಮಿನ ನೈಜತೆಯನ್ನ ಈ ಸಮಾಜದ ಮುಂದೆ ತೋರಿಸಿ ಕೊಡಲು ಅಲ್ಲಾಹು ತೌಫೀಕ್ ನೀಡಲಿ ಎಂಬ ಪ್ರಾರ್ಥನೆ ಸಲ್ಲಿಸುತ್ತಾರೆ...*
ಆಮೀನ್ ಯಾ ರಬ್ಬಲ್ ಆಲಮೀನ್
*📝ರಾಫಿಹ್ ಕಣ್ಣೂರ್*
No comments:
Post a Comment